ಮಂಜೇಶ್ವರದಲ್ಲಿ ತತ್ಸಮಾನ ಲಾಟರಿ ಕೇಂದ್ರಗಳಿಗೆ ದಾಳಿ: ಇಬ್ಬರ ಸೆರೆ; ಆರೋಪಿಗಳಿಗೆ ನ್ಯಾಯಾಂಗ ಬಂಧನ

ಮಂಜೇಶ್ವರ: ಎರಡು ಕಡೆಯ ತತ್ಸಮಾನ ಲಾಟರಿ ಕೇಂದ್ರಗಳಲ್ಲಿ ಪೊಲೀಸರು ನಡೆಸಿದ ದಾಳಿಯಲ್ಲಿ ಇಬ್ಬರನ್ನು ಬಂಧಿಸಲಾಗಿದೆ. ೩೨,೫೧೦ ರೂ. ಇವರಿಂದ ವಶಪಡಿಸಲಾಗಿದೆ. ಮಂಜೇಶ್ವರ ಕನಿಲ, ಮಿತ್ತಕನಿಲ ಹೌಸ್‌ನ ರವೀಣ್ ಕುಮಾರ್ (42), ಆಚಾರಿಮೂಲೆ ನಿವಾಸಿ ಸಚಿನ್ ಕುಮಾರ್ (44) ಎಂಬಿವರನ್ನು ಮಂಜೇಶ್ವರ ಎಸ್‌ಐ ಕೆ.ಜಿ. ರತೀಶ್ ಹಾಗೂ ತಂಡ ಸೆರೆ ಹಿಡಿದಿದೆ. ಶುಕ್ರವಾರ ರಾತ್ರಿ 8 ಗಂಟೆ ವೇಳೆಗೆ ಹೊಸಂಗಡಿಯ ರಾಜಧಾನಿ ಜ್ಯುವೆಲ್ಲರಿ ಸಮೀಪದ ಲಾಟರಿ ಸ್ಟಾಲ್ ಸಮೀಪದಿಂದ ಸಚಿನ್ ಕುಮಾರ್‌ನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈತನಿಂದ 14,250 ರೂ, ತತ್ಸಮಾನ ಲಾಟರಿ ನಡೆ ಸಲು ಉಪಯೋಗಿಸುತ್ತಿದ್ದ ಸಾಮಗ್ರಿ ಗಳನ್ನು ವಶಪಡಿಸಿರುವುದಾಗಿ ಪೊಲೀ ಸರು ತಿಳಿಸಿದ್ದಾರೆ. ಹೊಸಂಗಡಿಯ ರೈಲ್ವೇ ಗೇಟ್ ಸಮೀಪದ ಲಾಟರಿ ಸ್ಟಾಲ್ ಸಮೀಪದಿಂದ ರವೀಣ್ ಕುಮಾರ್‌ನನ್ನು ಬಂಧಿಸಲಾಗಿದ್ದು, ಈತನಿಂದ 8,990 ರೂ. ಹಾಗೂ ತತ್ಸ ಮಾನ  ಲಾಟರಿ ನಡೆಸಲು ಉಪಯೋ ಗಿಸುತ್ತಿದ್ದ ಸಾಮಗ್ರಿಗಳನ್ನು ವಶಪಡಿಸ ಲಾಗಿದೆ. ಇವರಿಬ್ಬರನ್ನೂ ನ್ಯಾಯಾಲ ಯದಲ್ಲಿ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ.

ತತ್ಸಮಾನ ಲಾಟರಿ ಹಾಗೂ ಮಟ್ಕಾ ಆಟ ತಡೆಯುವುದರಂಗವಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ವಿ. ವಿಜಯಭಾರತ್ ರೆಡ್ಡಿ ಕಠಿಣ ನಿರ್ದೇಶ ನೀಡಿದ್ದರು. ಇದರ ಆಧಾರದಲ್ಲಿ ಮುಂದಿನ ದಿನಗಳಲ್ಲೂ ಈ ರೀತಿಯ ಕೇಂದ್ರಗಳ ವಿರುದ್ಧ ತಪಾಸಣೆ ನಡೆಸಿ ಸೆರೆ ಹಿಡಿದು ಆರೋಪಿಗಳ ವಿರುದ್ಧ ಜಾಮೀನುರಹಿತ ಕಾಯ್ದೆಗಳಂತೆ ಕ್ರಮ ಕೈಗೊಳ್ಳಲಾಗುವುದೆಂದು ಪೊಲೀಸರು ತಿಳಿಸಿದ್ದಾರೆ.

You cannot copy contents of this page