ಮಂಜೇಶ್ವರದಿಂದ ನಾಪತ್ತೆಯಾದ ಬಾಲಕಿ ಮುಂಬಯಿಯಲ್ಲಿ ಪತ್ತೆ
ಮಂಜೇಶ್ವರ: ಮಂಜೇಶ್ವರ ಪೊಲೀ ಸ್ ಠಾಣೆ ವ್ಯಾಪ್ತಿಯಿಂದ ನಾಪತ್ತೆಯಾಗಿದ್ದ 17ರ ಹರೆಯದ ಬಾಲಕಿಯನ್ನು ಮುಂಬಯಿಯಲ್ಲಿ ಪತ್ತೆಹಚ್ಚಲಾಗಿದೆ. ಈ ತಿಂಗಳ 19ರಂದು ಬಾಲಕಿ ನಾಪತ್ತೆಯಾ ಗಿದ್ದಳು. ಈ ಬಗ್ಗೆ ಮನೆಯವರು ನೀಡಿದ ದೂರಿನಂತೆ ಕೇಸು ದಾಖಲಿಸಿದ ಪೊಲೀ ಸರು ಸೈಬರ್ ಸೆಲ್ನ ಸಹಾಯದೊಂ ದಿಗೆ ತನಿಖೆ ನಡೆಸಿದಾಗ ಬಾಲಕಿ ಮುಂಬಯಿಯಲ್ಲಿರುವುದಾಗಿ ತಿಳಿದು ಬಂದಿದೆ. ಇದರಂತೆ ಸಿಐ ರಾಜೀವ್ ಕುಮಾರ್, ಎಸ್ಐ ಇಸ್ಮಾಯಿಲ್, ಜನಮೈತ್ರಿ ಪೊಲೀಸ್ನ ಸಿಪಿಒ ಮಧು ಎಂಬಿವರು ಮುಂಬಯಿಗೆ ತೆರಳಿ ಬಾಲಕಿಯನ್ನು ಪತ್ತೆಹಚ್ಚಿ ನಿನ್ನೆ ರಾತ್ರಿ ಮಂಜೇಶ್ವರ ಠಾಣೆಗೆ ತಲುಪಿಸಿದ್ದಾರೆ. ಬಳಿಕ ಸಂಬಂಧಿಕರೊಂದಿಗೆ ಮನೆಗೆ ಕಳುಹಿಸಿದ್ದು, ಇಂದು ನ್ಯಾಯಾಲಯಕ್ಕೆ ಹಾಜರುಪಡಿಸು ವುದಾಗಿ ಪೊಲಸರು ತಿಳಿಸಿದ್ದಾರೆ.