ಮಂಜೇಶ್ವರದ ಯುವತಿ ನಾಪತ್ತೆ: ತನಿಖೆ ಆರಂಭ
ಉಪ್ಪಳ: ಮಂಜೇಶ್ವರ ನಿವಾಸಿಯಾದ ಯುವತಿಯೋರ್ವೆ ನಾಪತ್ತೆಯಾಗಿರುವುದಾಗಿ ದೂರಲಾಗಿದೆ. ಮಂಜೇಶ್ವರ ಕೆ.ಜಿ.ಎಂ. ರಸ್ತೆಯ ಸುನೈನ ಕೋಟೇಜ್‌ನಲ್ಲಿ ವಾಸಿಸುವ ರಮ್ಲ ಎಂಬವರ ಪುತ್ರಿ ರೈಶಾನ (20) ನಾಪತ್ತೆಯಾಗಿರುವುದಾಗಿ ತಿಳಿಸಲಾಗಿದೆ. ನಿನ್ನೆ ತಳಿಪರಂಬದಲ್ಲಿ ರುವ ಪತಿಯ ಮನೆಯಿಂದ ಈಕೆ ನಾಪತ್ತೆಯಾಗಿದ್ದಾಳೆ. ಮಧ್ಯಾಹ್ನ 1.30ರ ವೇಳೆ ಪುತ್ರಿ ನಾಪತ್ತೆಯಾಗಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಪತಿ ಮನೆಯಿಂದ ಹೊರಗೆ ತೆರಳಿದ ಪುತ್ರಿ ಕುಂಬಳೆಯ ಮುಸ್ತಫ ಎಂಬಾತನೊಂದಿಗೆ ಹೋಗಿರುವುದಾಗಿ ಶಂಸಯಿಸಲಾಗುತ್ತಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ತಾಯಿ ನೀಡಿದ ದೂರಿನಂತೆ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ.