ಮಂಜೇಶ್ವರ ಕ್ಷೇತ್ರದ ನವಕೇರಳ ವೇದಿಕೆ: ಮಹಿಳಾ ಸಂಗಮ

ಸೀತಾಂಗೋಳಿ: ನವಂಬರ್ ೧೮ರಂದು ಪೈವಳಿಕೆಯಲ್ಲಿ  ನಡೆಯುವ ಮಂಜೇಶ್ವರ ಕ್ಷೇತ್ರದ ನವಕೇರಳ ವೇದಿಕೆಯ ಪ್ರಚಾರಕ್ಕಾಗಿ ವನಿತಾ ಸಂಗಮ ಜರಗಿತು. ಪುತ್ತಿಗೆ ಪಂಚಾಯತ್‌ನಲ್ಲಿ ನಡೆದ ಮಹಿಳಾ ಸಂಗಮವನ್ನು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಉದ್ಘಾಟಿಸಿದರು. ಪಂಚಾಯತ್ ಅಧ್ಯಕ್ಷ ಡಿ. ಸುಬ್ಬಣ್ಣ ಆಳ್ವ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಇ.ಜಯಂತಿ, ಸ್ಥಾಯೀ ಸಮಿತಿ ಅಧ್ಯಕ್ಷರಾದ ಪಾಲಾಕ್ಷ ರೈ, ಅನಿತಾ, ಅಬ್ದುಲ್ ಮಜೀದ್, ಪ್ರೇಮಾ ಎನ್ ರೈ, ಪಿ. ಇಬ್ರಾಹಿಂ, ಪಂಚಾಯತ್ ಕಾರ್ಯದರ್ಶಿ ರಾಜೇಶ್ವರಿ, ಸಂಘಟನಾ ಸಮಿತಿ ಉಪಾಧ್ಯಕ್ಷ ಪಿ. ರಘುದೇವನ್ ಮಾಸ್ತರ್ ಮಾತನಾಡಿದರು. ಸಿಡಿಎಸ್ ಅಧ್ಯಕ್ಷೆ ಹೇಮಾವತಿ ಸ್ವಾಗತಿಸಿದರು. ನವಕೇರಳ ವೇದಿಕೆ ಪ್ರಚಾರದಂಗವಾಗಿ ನಡೆಸುವ ಮನೆ ಅಂಗಳಕೂಟ, ಘೋಷಣೆ, ಮೆರವಣಿಗೆ, ನವಕೇರಳ ದೀಪ ಮುಂತಾದವುಗಳನ್ನು ಯಶಸ್ವಿಗೊಳಿಸಲು ಸಭೆ ನಿರ್ಧರಿಸಿತು.

You cannot copy contents of this page