ಮಂಜೇಶ್ವರ ಚುನಾವಣಾ ತಕರಾರು ಪ್ರಕರಣ ರದ್ದುಪಡಿಸುವಂತೆ ಕೋರಿ ನ್ಯಾಯಾಲಯಕ್ಕೆ ಅರ್ಜಿ

ಕಾಸರಗೋಡು: ಮಂಜೇಶ್ವರ ವಿಧಾನಸಭೆಗೆ ನಡೆದ ಚುನಾವಣೆಗೆ ಸಂಬಂಧಿಸಿದ ಚುನಾವಣಾ  ತಕರಾರು ಪ್ರಕರಣವನ್ನು ರದ್ದುಪಡಿಸುವಂತೆ ಈ ಪ್ರಕರಣದಲ್ಲಿ ಆರೋಪಿಗಳನ್ನಾಗಿ ಹೆಸರಿಸಲಾಗಿರುವ ಬಿಜೆಪಿ ರಾಜ್ಯ ಅಧ್ಯಕ್ಷ ಕೆ. ಸುರೇಂದ್ರನ್ ಸೇರಿದಂತೆ ಇತರರು  ಪ್ರಸ್ತುತ ಪ್ರಕರಣದ ವಿಚಾರಣೆ ನಡೆಸುತ್ತಿರುವ ಕಾಸರಗೋಡು ಪ್ರಿನ್ಸಿಪಲ್ ಜಿಲ್ಲಾ ಸೆಶನ್ಸ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಅದನ್ನು ಪರಿಗಣಿಸುವ ದಿನಾಂಕವನ್ನು ನ್ಯಾಯಾಲಯ ಅಕ್ಟೋಬರ್ ೪ಕ್ಕೆ ನಿಗದಿಪಡಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ನಿನ್ನೆ ನೇರವಾಗಿ ಹಾಜರಾಗುವಂತೆ ನ್ಯಾಯಾಲಯ ಕೆ. ಸುರೇಂದ್ರನ್ ಮತ್ತಿತರಿಗೆ ಆದೇಶ ನೀಡಿತ್ತು. ಆದರೆ ಅವರೆಲ್ಲ ನ್ಯಾಯಾಲಯದಲ್ಲಿ ಹಾಜರಾಗಲಿಲ್ಲ.  ಈ ಪ್ರಕರಣವನ್ನು ರದ್ದುಪಡಿಸುವಂತೆ ಅರ್ಜಿ ಸಲ್ಲಿಸಲಾಗಿರುವ ಹಿನ್ನೆಲೆಯಲ್ಲಿ  ಅದರಲ್ಲಿ ಆರೋಪಿಗಳಾಗಿ ಹೆಸರಿ ಸಲಾಗಿರುವವರು ಅಂದು ನ್ಯಾಯಾಲಯದಲ್ಲಿ ನೇರವಾಗಿ ಹಾಜರಾಗಬೇಕಾದ ಅಗತ್ಯವಿದೆಯೇ ಎಂಬುವುದರ ಕುರಿತಾದ ವಾದ-ಪ್ರತಿವಾದವನ್ನು ನ್ಯಾಯಾಲಯ ಅಕ್ಟೋಬರ್ ೪ರಂದು ಆಲಿಸಿ ಬಳಿಕ ಮುಂದಿನ ತೀರ್ಮಾನ ಕೈಗೊಳ್ಳಲಿದೆ.

ತಮ್ಮ ವಿರುದ್ಧ ಪೊಲೀಸರು ದಾಖಲಿಸಿಕೊಂಡಿರುವ ಪ್ರಕರಣ ನೆಲೆಗೊಳ್ಳದೆಂದೂ ಮಾತ್ರವಲ್ಲ ಅದರಲ್ಲಿ ಆರೋಪಿಸಲಾಗಿರುವ  ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗದ ದಾರ್ಜನ್ಯ ತಡೆ ಕಾನೂನು ಕೂಡಾ ನೆಲೆಗೊಳ್ಳದು. ಅದರಿಂದಾಗಿ ಈ ಪ್ರಕರಣವನ್ನು ರದ್ದುಪಡಿಸಬೇಕೆಂದು ಕೆ. ಸುರೇಂದ್ರನ್ ಮತ್ತಿತರು ನ್ಯಾಯಾಲ ಯಕ್ಕೆ ಸಲ್ಲಿಸಿರುವ ಅರ್ಜಿಯಲ್ಲಿ  ವಿನಂತಿಸಿ ಕೊಂಡಿದ್ದಾರೆ. ಆದರೆ ನ್ಯಾಯಾಲಯ ನೀಡಿದ ಆದೇಶ ಪ್ರಕಾರ ನಿನ್ನೆ ಹಾಜರಾಗದವರ ವಿರುದ್ಧ ವಾರಂಟ್ ಜ್ಯಾರಿಗೊಳಿಸಬೇಕೆಂದು ಸ್ಪೆಷಲ್ ಪಬ್ಲಿಕ್ ಪ್ರೋಸಿಕ್ಯೂಟರ್   ನಿನ್ನೆ ನ್ಯಾಯಾಲಯದಲ್ಲಿ ವಾದಿಸಿದ್ದರು. ಖ್ಯಾತ ನ್ಯಾಯವಾದಿಗಳಾದ ಪಿ.ವಿ. ಹರಿ, ಎಂ. ಸುಷ್ಮಾ, ಕೆ. ಶ್ರೀಕಾಂತ್ ಎಂಬಿವರು  ಸುರೇಂ ದ್ರನ್ ಮತ್ತು ಇತರರ ಪರವಾಗಿಯೂ,  ಪ್ರೋಸಿಕ್ಯೂಶನ್ ಪರ ಸ್ಪೆಶಷಲ್ ಪ್ರೋಸಿಕ್ಯೂಟರ್ ಸಿ. ಶುಕ್ಕೂರ್ ನ್ಯಾಯಾಲಯದಲ್ಲಿ ವಾದಿಸಿದ್ದರು

Leave a Reply

Your email address will not be published. Required fields are marked *

You cannot copy content of this page