ಮಂಜೇಶ್ವರ ಚುನಾವಣಾ ಲಂಚ ಪ್ರಕರಣ: ನ್ಯಾಯಾಲಯದಲ್ಲಿ ಹಾಜರಾದ ಕೆ. ಸುರೇಂದ್ರನ್
ಕಾಸರಗೋಡು: ವಿಧಾನಸಭಾ ಚುನಾ ವಣೆ ವೇಳೆ ಲಂಚ ನೀಡಿ ಅಭ್ಯರ್ಥಿಯ ನಾಮಪತ್ರ ಹಿಂಪಡೆಯುವಂತೆ ಮಾಡ ಲಾಯಿತು ಎಂಬ ದೂರಿನಂತೆ ಪೊಲೀ ಸರು ದಾಖಲಿಸಿಕೊಂಡ ಪ್ರಕರಣದ ವಿಚಾರಣೆ ಕಾಸರಗೋಡು ಪ್ರಿನ್ಸಿಪಲ್ ಜಿಲ್ಲಾ ಸೆಶನ್ಸ್ ನ್ಯಾಯಾ ಲಯದಲ್ಲಿ ಇಂದು ಮತ್ತೆ ಆರಂಭಗೊಂಡಿದೆ.
ಈ ಪ್ರಕರಣದಲ್ಲಿ ಆರೋಪಿಗಳಾಗಿ ಹೆಸರಿಸಲಾಗಿರುವ ಬಿಜೆಪಿ ರಾಜ್ಯಧ್ಯಕ್ಷ ಕೆ. ಸುರೇಂದ್ರನ್, ಬಿಜೆಪಿ ಮಾಜಿ ಜಿಲ್ಲಾ ಅಧ್ಯಕ್ಷ ವಿ. ಬಾಲಕೃಷ್ಣ ಶೆಟ್ಟಿ, ಯುವ ಮೋರ್ಛಾ ರಾಜ್ಯ ಕೋಶಾಧಿಕಾರಿ ಸುನಿಲ್ ನಾಯ್ಕ್, ಮಣಿಕಂಠ ರೈ, ಲೋಕೇಶ್, ಕೆ. ಸುಂದರ ಎಂಬವರು ಇಂದು ಬೆಳಿಗ್ಗೆ ವಿಚಾರಣಾ ನ್ಯಾಯಾ ಲಯದಲ್ಲಿ ನೇರವಾಗಿ ಹಾಜರಾದರು. ಈ ಪ್ರಕರಣದ ವಿಚಾರಣೆ ನ್ಯಾಯಾ ಲಯದಲ್ಲಿ ಈ ಹಿಂದೆ ಆರಂಭಗೊಂಡ ವೇಳೆ ಲಂಚ ನೀಡಿದ ಆರೋಪದಂತೆ ನೀಡಲಾಗಿ ರುವ ಹಣ, ಆ ಬಗ್ಗೆ ನಡೆದ ತನಿಖೆ ಮತ್ತು ಅದರ ಆಧಾರದಲ್ಲಿ ತಯಾರಿಸಲಾದ ದೋಷಾರೋಪ ಪಟ್ಟಿ ಕಾನೂನು ಸಿಂಧುತ್ವ ಹೊಂದಿಲ್ಲವೆಂದು ಹೇಳಿ ಆರೋಪಿಗಳ ಪರವಾಗಿ ಅವರ ವಕೀಲರು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಮಾತ್ರವಲ್ಲದೆ ಆ ಹಿನ್ನೆಲೆಯಲ್ಲಿ ಈ ಪ್ರಕರಣವನ್ನು ರದ್ದುಪಡಿಸಬೇಕೆಂದೂ ಅವರು ನ್ಯಾಯಾಲಯದೊಡನೆ ವಿನಂತಿಸಿಕೊಂಡಿದ್ದರು. ಆದರೆ ಆ ಅರ್ಜಿಯನ್ನು ಪರಿಶೀಲಿಸುವ ಹಾಗಿದ್ದಲ್ಲಿ ಆರೋಪಿಗಳು ಮೊದಲು ನ್ಯಾಯಾಲಯದಲ್ಲಿ ನೇರವಾಗಿ ಹಾಜರಾಗಲಿ ಎಂದು ಅಂದು ನ್ಯಾಯಾಲಯ ನಿರ್ದೇಶ ನೀಡಿತ್ತು. ಅದರಂತೆ ಕೆ. ಸುರೇಂದ್ರನ್ ಸೇರಿದಂತೆ ಆರು ಮಂದಿ ಇಂದು ನ್ಯಾಯಾಲ ಯದಲ್ಲಿ ನೇರ ಹಾಜರಾಗಿದ್ದಾರೆ. ಬಳಿಕ ಅವರಿಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
ಮಂಜೇಶ್ವರ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ಬಿಎಸ್ಪಿ ಉಮೇದ್ವಾರರಾಗಿ ಸ್ಪರ್ಧಸಿದ್ದ ಕೆ. ಸುಂದರರನ್ನು ಅಪಹರಿಸಿ ಕೊಂಡುಹೋಗಿ ಅವರಿಗೆ ೨.೫ ಲಕ್ಷ ರೂ. ಮತ್ತು ಸ್ಮಾರ್ಟ್ ಫೋನ್ ನೀಡಿ ಆ ಮೂಲಕ ಅವರ ನಾಮಪತ್ರವನ್ನು ಹಿಂತೆಗೆದುಕೊ ಳ್ಳುವಂತೆ ಮಾಡಲಾಗಿತ್ತೆಂಬ ಆರೋಪದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.
ಈ ಪ್ರಕರಣದ ಬಗ್ಗೆ ತನಿಖೆ ನಡೆಸಿದ ಕ್ರೈಂ ಬ್ರಾಂಚ್ ಪೊಲೀಸರು ೨೦೨೩ ಜನವರಿ ೧೦ರಂದು ನ್ಯಾಯಾಲಯಕ್ಕೆ ದೋಷಾರೋಪಪಟ್ಟಿ ಸಲ್ಲಿಸಿದ್ದರು.