ಮಂಜೇಶ್ವರ ಠಾಣೆಯ ಲಾಕಪ್‌ನಿಂದ ಪರಾರಿಯಾದ ವಾರಂಟ್ ಆರೋಪಿ ಸೆರೆ

ಉಪ್ಪಳ: ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ ಲಾಕಪ್‌ನಿಂದ ಪರಾರಿಯಾದ ವಾರಂಟ್ ಆರೋಪಿಯನ್ನು ಬಂಧಿಸಲಾಗಿದೆ. ಹೊಸಬೆಟ್ಟು ಸಲ್ಮಾ ಮಂಜಿಲ್‌ನ  ಸಿದ್ದಿಕ್ ಸಾರಿಕ್ ಪರ್ಹಾನ್ (29) ಎಂಬಾತನನ್ನು ಮಂಜೇಶ್ವರ ಪೊಲೀಸರು ಸೆರೆಹಿಡಿದಿದ್ದಾರೆ.  ಸೋಮವಾರ ಮುಂಜಾನೆ ಈತ ಲಾಕಪ್‌ನಿಂದ ಪರಾರಿಯಾಗಿದ್ದನು. ಈ ಬಗ್ಗೆ ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾಗ ಆರೋಪಿ ಮುಂಬೈಗೆ ಪರಾರಿಯಾಗಿ ದ್ದಾನೆಂಬ ಬಗ್ಗೆ ಪ್ರಚಾರವುಂ ಟಾಗಿತ್ತು. ಆದರೆ ಅದನ್ನು ನಂಬದ ಪೊಲೀಸರು ಆರೋಪಿ ಮಂಜೇಶ್ವರ ಭಾಗದಲ್ಲೇ ಇದ್ದಾನೆಂದು ಖಚಿತಪಡಿಸಿ ಶೋಧ ಮುಂದುವರಿಸಿದ್ದರು. ಈ ವೇಳೆ ಆರೋಪಿಯನ್ನು ಮಂಜೇಶ್ವರ ದಿಂದಲೇ ಪತ್ತೆಹಚ್ಚಲಾಗಿದೆ.

2019 ಮೇ 25ರಂದು ಸಂಜೆ ಕುಂಜತ್ತೂರು  ತೂಮಿನಾಡಿನಲ್ಲಿ ಪೊಲೀಸರ ಮೇಲೆ ಕಲ್ಲೆಸೆದು, ಪ್ರಚೋದನಾಕಾರಿ ಘೋಷಣೆ ಮೊಳಗಿಸಿದ ಪ್ರಕರಣದಲ್ಲಿ ಸಿದ್ದಿಕ್ ಸಾರಿಕ್ ಪರ್ಹಾನ್ ಆರೋಪಿಯಾಗಿದ್ದಾನೆ.  ಯುಡಿಎಫ್ ಅಭ್ಯರ್ಥಿ ರಾಜ್‌ಮೋಹನ್ ಉಣ್ಣಿತ್ತಾನ್‌ರ ಗೆಲುವಿಗೆ ಹರ್ಷ ಸೂಚಿಸಿ ನಡೆಸಿದ ಮೆರವಣಿಗೆ ವೇಳೆ ಘರ್ಷಣೆ ನಡೆದಿತ್ತು. ಪ್ರಸ್ತುತ ಪ್ರಕರಣದಲ್ಲಿ ಸಿದ್ದಿಕ್ ಸಾರಿಕ್ ಪರ್ಹಾನನನ್ನು  ಕಾಸರಗೋಡು ಪ್ರಥಮದರ್ಜೆ ಮೆಜಿಸ್ಟ್ರೇಟ್ ನ್ಯಾಯಾಲಯ ತಲೆಮರೆಸಿಕೊಂಡ ಆರೋಪಿಯೆಂದು ಘೋಷಿಸಿತ್ತು. ತಲೆಮರೆಸಿಕೊಂಡ ಈತನನ್ನು ಇತ್ತೀಚೆಗೆ ಬಂಧಿಸಲಾಗಿತ್ತು. ಸೋಮವಾರ ನ್ಯಾಯಾಲಯದಲ್ಲಿ ಹಾಜರುಪಡಿಸಲಿರು ವಂತೆಯೇ ಆರೋಪಿ ಲಾಕಪ್‌ನಿಂದ ಪರಾರಿಯಾಗಿದ್ದನು.

RELATED NEWS

You cannot copy contents of this page