ಮಂಜೇಶ್ವರ ನಿವಾಸಿ ಸಹಿತ ಆರು ಮಂದಿ ಅಂತಾರಾಜ್ಯ ಕಳ್ಳರ ಸೆರೆ

ತಲಪಾಡಿ: ವಿವಿಧ ಕಳವು ಪ್ರಕರಣಗಳಲ್ಲಿ ಆರು ಮಂದಿಯನ್ನು ಬಂಧಿಸಿದ ಕೋಣಾಜೆ, ಕಂಕನಾಡಿ ಪೊಲೀಸರು ಆರೋಪಿಗಳಿಂದ ೨೨.೫೦ ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿದ್ದಾರೆ. ಜುಲೈ ೮ರಂದು ರಾತ್ರಿ ಮಂಗಳೂರು ಕಪಿತಾನಿಯೋ ಬಳಿಯ ದಿನಸಿ ಅಂಗಡಿಯಿಂದ ೧೦.೨೦ ಲಕ್ಷ ರೂ. ಕಳವುಗೈದ ಉತ್ತರ ಪ್ರದೇಶ ನಿವಾಸಿಗಳು ಹಾಗೂ ಕೋಣಾಜೆ ಪೊಲೀಸ್ ಠಾಣೆ ವ್ಯಾಪ್ತಿಯ ಮೂರು ಮನೆಗಳಿಂದ ನಡೆಸಿದ ಕಳವು ಆರೋಪಿಗಳಾದ ಮಂಜೇಶ್ವರ ನಿವಾಸಿಗಳ ಸಹಿತ ನಾಲ್ಕು ಮಂದಿಯನ್ನು ಸೆರೆ ಹಿಡಿಯಲಾಗಿದೆ.

ಉತ್ತರ ಪ್ರದೇಶ ನಿವಾಸಿಗಳಾದ ಮಹಮ್ಮದ್ ನಸೀರ್ ಹೌಸಿಲ್‌ಖಾನ್ (27), ಇಲಿಯಾಸ್ ಖಾನ್ (22), ಮಂಜೇಶ್ವರ ನಿವಾಸಿ ಮಹಮ್ಮದ್ ಸಿಯಾಬ್ ಅಲಿಯಾಸ್ ಸಿಯಾ (30) ಬಜಪೆ ನಿವಾಸಿ ಮಹಮ್ಮದ್ ಅರ್ಪಾಸ್ ಅಲಿಯಾಸ್ ಅರ್ಪಾ (19), ಸಫ್ವಾನ್ (20) ಮತ್ತು ಮೊಹಮ್ಮದ್ ಜಂಶೀರ್ (20)ನನ್ನು ಸೆರೆ ಹಿಡಿಯಲಾಗಿದೆ.

ಉತ್ತರ ಪ್ರದೇಶ ನಿವಾಸಿಗಳು ಪಂಪ್‌ವೆಲ್‌ನ ಒಂದು ಅಂಗಡಿಯಿಂದ 10.20 ಲಕ್ಷ ರೂ. ಕಳವುಗೈದು ಪರಾರಿಯಾ ಗಲು ಯತ್ನಿಸುತ್ತಿದ್ದ ಮಧ್ಯೆ ಸೆರೆ ಹಿಡಿಯಲಾಗಿದೆ. ಇವರನ್ನು ಪುಣೆಯಿಂದ ವಶಪಡಿಸಲಾಗಿದ್ದು, ಕಳವು ಆದ 10.13 ಲಕ್ಷ ರೂ.ವನ್ನು ವಶಪಡಿಸಲಾಗಿದೆ. ಕೆಲಸಕ್ಕಾಗಿ ಮಂಗಳೂರಿಗೆ ಬಂದು ತಲುಪಿದ ಇವರು ಖರ್ಚಿಗೆ ಹಣವಿಲ್ಲದೆ ಕಳವುಗೈದಿದ್ದಾರೆನ್ನಲಾ ಗಿದೆ. ಮಧ್ಯಾಹ್ನ ವೇಳೆ ಅಂಗಡಿಗಳನ್ನು ಗಮನಿಸಿ ಹೆಚ್ಚು ವ್ಯಾಪಾ ರವಾಗುವ ಅಂಗಡಿಯನ್ನು ಕೇಂದ್ರೀಕರಿಸಿ ಕಳವು ನಡೆಸಿದ್ದಾರೆ.

ಕೋಣಾಜೆ ವ್ಯಾಪ್ತಿಯ ಮೂರು ಕಡೆ ಕಳೆದೆರಡು ಮೂರು ತಿಂಗಳಲ್ಲಿ ನಡೆಸಿದ ಕಳವು ಪ್ರಕರಣಗಳಲ್ಲಿ ಪೊಲೀಸರು ಹುಡುಕಾಡುತ್ತಿದ್ದ ನಾಲ್ಕು ಮಂದಿ ಆರೋಪಿಗಳು 9.25 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ಕಳವುಗೈದಿದ್ದರು. ಮಂಜೇಶ್ವರ ನಿವಾಸಿ ಮಹಮ್ಮದ್ ಸಿಯಾಬ್ ನೇತೃತ್ವದಲ್ಲಿ ತಂಡ ಕಳವು ನಡೆಸಿದೆ. ಪಾತೂರು ಕಡೆಯಿಂದ ಸಾಗುತ್ತಿದ್ದ ಕಾರನ್ನು ತಡೆದು ನಿಲ್ಲಿಸಿದಾಗ ಅದರಲ್ಲಿ ಎರಡು ಡ್ರ್ಯಾಗನ್, ಮೂರು ಡಮ್ಮಿ ಪಿಸ್ತೂಲ್, ಮಂಕಿ ಕ್ಯಾಪ್‌ಗಳು, ಹ್ಯಾಂಡ್ ಗ್ಲೌಸ್, ಬಾಗಿಲನ್ನು ಒಡೆಯುವ ಉಪಕರಣಗಳು ಕಂಡು ಬಂದಿವೆ.

ಬಳಿಕ ವಾಹನ ದಲ್ಲಿದ್ದವರನ್ನು ವಶಕ್ಕೆ ತೆಗೆದು ಅವರು ನೀಡಿದ ಮಾಹಿತಿಯಂತೆ ಸಜಿಪ ನಿವಾಸಿ ಮೊಹಮ್ಮದ್ ಜಂಶೀರ್‌ನನ್ನು ಕಸ್ಟಡಿಗೆ ತೆಗೆಯಲಾಗಿದೆ. ಇವರಿಂದ 130 ಗ್ರಾಂ ತೂಕದ ಚಿನ್ನಾಭರಣ, ಒಂದು ವಾಚ್, ಕಾರು ಸಹಿತ 12.50 ಲಕ್ಷ ರೂ. ಮೌಲ್ಯದ ಸೊತ್ತನ್ನು ವಶಪಡಿಸಲಾಗಿದೆ. ಆರೋಪಿಗಳಲ್ಲಿ ಮೊಹಮ್ಮದ್ ಸಿಯಾಬ್ ವಿರುದ್ಧ 13 ಪ್ರಕರಣಗಳು ದಾಖಲಾಗಿದ್ದು, ಕೊಣಾಜೆಯಲ್ಲಿ ನಾಲ್ಕು ದರೋಡೆ, ಮನೆ ಕಳ್ಳತನ, ಉಳ್ಳಾಲ ಠಾಣೆಯಲ್ಲಿ ಕೊಲೆಯತ್ನ, ಮಾದಕ ವಸ್ತು ಮಾರಾಟ, ಬಜಪೆಯಲ್ಲಿ ಎರಡು ಮನೆ ಕಳವು, ಮಂಜೇಶ್ವರ ಠಾಣೆಯಲ್ಲಿ ಒಂದು ಮನೆ ಕಳವು ಪ್ರಕರಣ ದಾಖಲಾಗಿದೆ. ಇದೇ ರೀತಿ ಮಹಮ್ಮದ್ ಅರ್ಫಾಸ್ ವಿರುದ್ಧವೂ ಹಲವು ಠಾಣೆಗಳಲ್ಲಿ ಪ್ರಕರಣ ದಾಖಲಾಗಿವೆ.

Leave a Reply

Your email address will not be published. Required fields are marked *

You cannot copy content of this page