ಕಾಸರಗೋಡು: ಮಂಜೇಶರದ ಶಾಸಕರನ್ನು ಕಾಣಬೇಕಿದ್ದರೆ ನಾಡಿನ ಜನತೆ ವಿದೇಶ ಪ್ರವಾಸ ಮಾಡಬೇಕಾದ ಪರಿಸ್ಥಿತಿ ಇದೆ ಎಂದು ಬಿಜೆಪಿ ದೂರಿದೆ. ಪ್ರತಿ ತಿಂಗಳು ವಿದೇಶ ಪ್ರವಾಸ ಮಾಡುವ ಶಾಸಕರ ನಡೆ ಶಂಕಾಸ್ಪದವಾಗಿದೆ ಎಂದೂ ಬಿಜೆಪಿ ಆರೋಪಿಸಿದೆ. ಈ ಪ್ರವಾಸ ಮಂಜೇಶ್ವರ ಕ್ಷೇತ್ರದ ಅಭಿವೃದ್ಧಿಗೋ, ಅಥವಾ ಸ್ವಂತ ಅಭಿವೃದ್ಧಿಗೋ ಎಂದು ಬಿಜೆಪಿ ಪ್ರಶ್ನಿಸಿದೆ. ಸ್ಥಳೀಯಾಡಳಿತದ ಅಭಿವೃದ್ಧಿ ಸೆಮಿನಾರ್‌ಗಳಲ್ಲಿ ಶಾಸಕರು ಭಾಗವಹಿಸುತ್ತಿಲ್ಲ. ರಾಜ್ಯ ಸರಕಾರದ ವಿರುದ್ಧ ಮಾತನಾಡುತ್ತಿಲ್ಲ. ಶಾಸಕರ ಈ ಮೌನದಿಂದ ಜನಸಾಮಾನ್ಯರಿಗೆ ಸಮಸ್ಯೆಯಾಗುತ್ತಿದ್ದು, ವಿವಿಧ ಯೋಜ ನೆಗಳ ಫಂಡ್ ನಷ್ಟವಾಗುತ್ತಿದೆ ಎಂದೂ ಬಿಜೆಪಿ ತಿಳಿಸಿದೆ. ಈ ಬಗ್ಗೆ ವರ್ಕಾಡಿ ಪಂ. ಸಮಿತಿ ಸಭೆ ತಚ್ಚಿರೆಪದವುನಲ್ಲಿ ನಡೆದಿದ್ದು, ಮಂಡಲ ಅಧ್ಯಕ್ಷ ಆದರ್ಶ್ ಬಿ.ಎಂ. ಉದ್ಘಾಟಿಸಿದರು.
ಮುಖಂಡರಾದ ದೂಮಪ್ಪ ಶೆಟ್ಟಿ, ಅಶ್ವಿನಿ ಎಂ.ಎಲ್, ತುಳಸಿ ಕುಮಾರಿ, ಭಾಸ್ಕರ ಪೊಯ್ಯೆ, ರಕ್ಷಣ್ ಅಡಕಲ, ರಾಜ್ ಕುಮಾರ್, ನಾಗೇಶ್ ಬಳ್ಳೂರು, ರವಿರಾಜ್, ಜನಪ್ರತಿನಿಧಿಗಳು ಭಾಗವಹಿಸಿದರು. ಯತಿರಾಜ್ ಶೆಟ್ಟಿ ಸ್ವಾಗತಿಸಿದರು.