ಮಂಡಲ ಕಾಂಗ್ರೆಸ್ ಅಧ್ಯಕ್ಷರ ಮನವಿಗೆ ಸ್ಪಂದಿಸಿದ ಸರಕಾರ: ಮುಜುಂಗಾವು ಯಕ್ಷಗಾನ ಕಲಾ ಕೇಂದ್ರ ಕಾಮಗಾರಿ ನಡೆಸಲು ಸರಕಾರ ನಿರ್ಧಾರ

ಕುಂಬಳೆ: ನಿರ್ಮಾಣ ಕಾಮಗಾರಿ ಅರ್ಧದಲ್ಲೇ ಮೊಟಕುಗೊಂಡ ಮುಜುಂಗಾವಿನ ಯಕ್ಷಗಾನ ಕುಲಪತಿ ಕುಂಬಳೆ ಪಾರ್ತಿಸುಬ್ಬ ಸ್ಮಾರಕ ಯಕ್ಷಗಾನ ಕಲಾಕೇಂದ್ರ ಕಾಮಗಾರಿ ಪುನರಾರಂಭಿಸಲು ಸರಕಾರ ಕ್ರಮ ಕೈಗೊಂಡಿದೆ. ಕುಂಬಳೆ ಮಂಡಲ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರವಿ ಪೂಜಾರಿ 2024 ಡಿಸೆಂಬರ್ 20ರಂದು ನಡೆದ ತಾಲೂಕು ಅದಾಲತ್‌ನಲ್ಲಿ ನೀಡಿದ ಮನವಿಗೆ ಉತ್ತರವಾಗಿ ಜಿಲ್ಲಾ ಅಕೌಂಟ್ಸ್ ಆಫೀಸರ್ ಈ ವಿಷಯವನ್ನು ತಿಳಿಸಿದ್ದಾರೆ.

ತುಳುನಾಡಿನ ಸ್ವಂತ ಕಲೆಯಾದ ಯಕ್ಷಗಾನ ಹಾಗೂ ಯಕ್ಷಗಾನದ ಕುಲಪತಿ ಪಾರ್ತಿಸುಬ್ಬರನ್ನು ಸರಕಾರ ಅವಹೇಳನಗೈಯ್ಯು ತ್ತಿದೆಯೆಂದು ರವಿ ಪೂಜಾರಿ ಮನವಿಯಲ್ಲಿ ಆರೋಪಿಸಿದ್ದರು. ಕಾಮಗಾರಿ ಆರಂಭಿಸಿದ ಸ್ಮಾರಕ ಮಂದಿರ ನಿರ್ಮಾಣವನ್ನು ಅರ್ಧದಲ್ಲೇ ಮೊಟಕುಗೊಳಿ ಸಿರುವುದನ್ನು ಮನವಿಯಲ್ಲಿ ತಿಳಿಸಿದ್ದರು. ಶೋಚನೀ ಯಾವಸ್ಥೆಯಲ್ಲಿರುವ ಈ ಕಟ್ಟಡದ ಕೆಲಸ ಪೂರ್ತಿಗೊಳಿಸಲು ಅಗತ್ಯದ ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿತ್ತು.

2019ರಲ್ಲಿ ನಿರ್ಮಾಣ ಆರಂಭಿಸಿದ ಕಟ್ಟಡದ ಕಾಮಗಾರಿಯನ್ನು ಅರ್ಧದಲ್ಲೇ ಉಪೇಕ್ಷಿಸಲಾಗಿದೆ. ಕಾಡು ತುಂಬಿಕೊಂಡಿರುವ ಈ ಪ್ರದೇಶ ರಾತ್ರಿ ಹೊತ್ತಿನಲ್ಲಿ ಸಮಾಜ ದ್ರೋಹಿಗಳ ಆವಾಸ ಕೇಂದ್ರವಾಗಿಯೂ ಬದಲಾಗಿದೆ.

You cannot copy contents of this page