ಮಕ್ಕಳನ್ನು ಶಾಲೆಗೆ ಕಳುಹಿಸಿದ ಬಳಿಕ ಯುವತಿ ಆತ್ಮಹತ್ಯೆ

ಹೊಸದುರ್ಗ:  ಯುವತಿ ಯೋರ್ವೆ ಮನೆಯ ಬೆಡ್ ರೂಂನಲ್ಲಿ  ನೇಣು ಬಿಗಿದು ಸಾವಿಗೀಡಾದ ಸ್ಥಿತಿ ಯಲ್ಲಿ ಪತ್ತೆಯಾಗಿದ್ದಾರೆ. ಕಾಞಂ ಗಾಡ್ ಬಳಿಯ ವಳವಿಲ್ ಹೌಸ್‌ನ  ವಿ. ಬಿಜು ಎಂಬವರ ಪತ್ನಿ ಪಿ. ಶ್ರೀಜಾ (೩೫) ಸಾವಿಗೀಡಾದ ಯುವತಿ. ನಿನ್ನೆ ಬೆಳಿಗ್ಗೆ ಮಕ್ಕಳನ್ನು ಶಾಲೆಗೆ ಕಳುಹಿಸಿದ ಬಳಿಕ ಈಕೆ  ನೇಣು ಬಿಗಿದು ಸಾವಿಗೀಡಾಗಿರುವುದಾಗಿ ಹೇಳಲಾಗುತ್ತಿದೆ. ಈ ಹೊತ್ತಿನಲ್ಲಿ ಪತಿ ಮಕ್ಕಳನ್ನು ವಾಹನಕ್ಕೆ ಹತ್ತಿಸಲು ತೆರಳಿದ್ದರು. ಅವರು ಮರಳಿ ಬಂದಾಗ  ಶ್ರೀಜಾ ನಾಪತ್ತೆಯಾಗಿದ್ದರೆಂದು ಹೇಳಲಾಗುತ್ತಿದೆ. ತೋಟಕ್ಕೆ ಹೋಗಿರಬಹುದೆಂದು ಭಾವಿಸಿ ಅಲ್ಲಿಗೆ ತೆರಳಿ ಹುಡುಕಿದರೂ ಪತ್ತೆಯಾಗಲಿಲ್ಲ. ಮರಳಿ ಮನೆಗೆ ತಲುಪಿ ನೋಡಿದಾಗ ಬೆಡ್‌ರೂಂನಲ್ಲಿ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆನ್ನಲಾಗಿದೆ. ಅಂಬಲತ್ತರ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿದ್ದಾರೆ. ತಾಯನ್ನೂರಿನ ದಿ| ದಾಮೋದರನ್-ಕುಂಞಿಪೆಣ್ ದಂಪತಿಯ ಪುತ್ರಿಯಾದ ಮೃತರು ಮಕ್ಕಳಾದ ಅಮೈ, ಅನ್ವಿತ, ಸಹೋದರಿಯರಾದ ಶೈಜ, ಶೀಬಾ ಹಾಗೂ ಅಪಾರ  ಬಂಧು-ಮಿತ್ರರನ್ನು ಅಗಲಿದ್ದಾರೆ.

You cannot copy contents of this page