ಮಕ್ಕಳ ದಿನಾಚರಣೆ ಪ್ರಯುಕ್ತ ಆಲ್ ಕೇರಳ ಫೋಟೋಗ್ರಾಫರ್ಸ್ ಅಸೋಸಿಯೇಷನ್‌ನಿಂದ ವಿವಿಧ ಸ್ಪರ್ಧೆಗಳು
ಕಾಸರಗೋಡು: ಆಲ್‌ಕೇರಳ ಫೋಟೋಗ್ರಾಫರ್ಸ್ ಅಸೋಸಿಯೇ ಷನ್ ವೆಸ್ಟ್ ಯೂನಿಟ್ ಕಾಸರ ಗೋಡು ಇದರ ವತಿಯಿಂದ ಮಕ್ಕಳ ದಿನಾಚರಣೆ ಪ್ರಯುಕ್ತ ಕಾಸರಗೋಡು ವಲಯ ಸದಸ್ಯರ ೧ ನೇ ತರಗತಿಯಿಂದ ೪ ನೇ ತರಗತಿಯ ಮಕ್ಕಳಿಗೆ ಚಿತ್ರರಚನೆ ಸ್ಪರ್ಧೆಯನ್ನು ಆಯೋಜಿಸಲಾಯಿತು. ಕಾಸರಗೋಡು ಶ್ರೀ ವಿಶ್ವಕರ್ಮ ಭಜನಾ ಮಂದಿರದಲ್ಲಿ ನಡೆದ ಕಾರ್ಯಕ್ರದಲ್ಲಿ ಯೂನಿಟ್ ಅಧ್ಯಕ್ಷ ಮೈಂದಪ್ಪ ಕೆ.ಎಂ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಧೂರು ಪಂಚಾಯತ್ ಸದಸ್ಯೆ ಜನನಿ ಅನಿಲ್, ಎಕೆಪಿಎ ಜಿಲ್ಲಾ ಸಮಿತಿ ಸದಸ್ಯ ರತೀಶ್, ಎಕೆಪಿಎ ಕಾಸರ ಗೋಡು ವಲಯ ಅಧ್ಯಕ್ಷ ವಾಸು, ಕಾರ್ಯದರ್ಶಿ ರೇಖಾ ಮುಳ್ಳೇರಿಯಾ, ಪಿ.ಆರ್.ಒ ಚಂದ್ರಶೇಖರ.ಎA, ಯೂನಿಟ್ ಕೋಶಾಧಿಕಾರಿ ಅಮಿತ್, ಯೂನಿಟ್ ಸದಸ್ಯರಾದ ಸಾಯಿ ಪ್ರಸಾದ್, ಪ್ರೀತಿಚಂದ್ರನ್, ಹೇಮಂತ್, ಉದಯ ಉಪಸ್ಥಿತರಿದ್ದರು.
ಕಲಾವಿದರಾದ ನವೀನ್ ಚಂದ್ರ ಆಚಾರ್ಯ ನಾಯ್ಕಾಪು ಹಾಗೂ ಯೋಗೀಶ್ ಆಚಾರ್ಯ ನೆಲ್ಲಿಕುಂಜೆ ತೀರ್ಪಗಾರರಾಗಿ ಸಹಕರಿಸಿದರು. ಸ್ಪರ್ಧೆಯಲ್ಲಿ ಪ್ರಥಮ ಆಶ್ರಿತ್ ರೈ ಮಧೂರು, ದ್ವಿತೀಯ ಅನಗ್, ತೃತೀಯ ತೃಷನ್ ಆಚಾರ್ಯ ಕೆ. ಮತ್ತು ಆಧೀಶ್ ಎಚ್., ಮನಸ್ವಿ ಯು.ಎಸ್., ಅಲ್ವಿನ್ ಚಂದ್ರ, ತನಿಷ್ಕಾ ಎ.ಪ್ರಣಿತ.ಎಸ್ ಎಂಬೀ ಪುಟಾಣಿಗಳು ಪ್ರೋತ್ಸಾಹಕ ಬಹುಮಾನಗಳಿಸಿದರು, ಯೂನಿಟ್ ಕಾರ್ಯದರ್ಶಿ ವಸಂತ್ ಕೆರೆಮನೆ ಸ್ವಾಗತಿಸಿ, ಯೂನಿಟ್ ಉಪಾಧ್ಯಕ್ಷ ಗಣೇಶ್ ರೈ ವಂದಿಸಿದರು.