ಮಕ್ಕಳ ಮುಂದೆ ನಗ್ನತೆ ಪ್ರದರ್ಶನ: ಆರೋಪಿ ಸೆರೆ
ತೃಶೂರು: ಪ್ರಾಯಪೂರ್ತಿಯಾಗದ ಮಕ್ಕಳ ಮುಂದೆ ನಗ್ನತೆ ಪ್ರದರ್ಶಿಸಿದ ಆರೋಪಿ ಸೆರೆಯಾಗಿದ್ದಾನೆ. ಕೋಡಾಲಿ ನಿವಾಸಿ ಗೋಪಾಲ್ (28)ನನ್ನು ಪೊಲೀಸರು ಸೆರೆ ಹಿಡಿದಿದ್ದಾರೆ. ಈ ತಿಂಗಳ ೧೧ರಂದು ಕೇಸಿಗೆ ಆಸ್ಪದವಾದ ಘಟನೆ ನಡೆದಿದೆ. ಮನೆ ಅಂಗಳದಲ್ಲಿ ಆಟವಾಡುತ್ತಿದ್ದ ಮಕ್ಕಳ ಮುಂದೆ ಈತ ನಗ್ನತೆ ಪ್ರದರ್ಶಿಸಿದ್ದನು. ಮಕ್ಕಳಲ್ಲಿ ಇಲ್ಲಿ ಹಿರಿಯರು ಯಾರೂ ಇಲ್ಲವೇ ಎಂದು ಕೇಳಿ ತಿಳಿದುಕೊಂಡು ಬಳಿಕ ತನ್ನ ಪರಿಚಯ ಮಾಡಿ, ತಾನೊಂದು ಬಾಡಿಗೆ ಮನೆಗಾಗಿ ಹುಡುಕಾಟ ನಡೆಸುತ್ತಿದ್ದೇನೆ ಎಂದು ತಿಳಿಸಿದ್ದನು. ಅದರ ಬಳಿಕ ತನ್ನ ನಿಜ ಸ್ವರೂಪ ಈತ ತೋರಿಸಿದ್ದಾನೆ. ಮಕ್ಕಳು ಬೊಬ್ಬೆ ಹಾಕಿ ಪರಾರಿಯಾದರು. ಈತನ ಈ ಕೃತ್ಯ ಮನೆಯ ಸಿಸಿ ಟಿವಿಯಲ್ಲಿ ದಾಖಲುಗೊಂಡಿತ್ತು. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ರಿಮಾಂಡ್‌ನಲ್ಲಿರಿಸಲಾಗಿದೆ. ಪೋಕ್ಸೋ ಪ್ರಕಾರ ಕೇಸು ದಾಖಲಿಸಲಾಗಿದೆ.