ಮಕ್ಕಾಕ್ಕೆ ತೆರಳಿದ್ದ ಆಲಂಪಾಡಿ ನಿವಾಸಿ ನಿಧನ
ಕಾಸರಗೋಡು: ತಾಯಿಯೊಂದಿಗೆ ಹಜ್‌ಗೆ ತೆರಳಿದ ಆಲಂಪಾಡಿ ನಿವಾಸಿ ಮಕ್ಕಾದಲ್ಲಿ ಮೃತಪಟ್ಟರು. ಆಲಂಪಾಡಿ ಸರಕಾರಿ ಹೈಸ್ಕೂಲ್ ಸಮೀಪದ ನಿವಾಸಿ ಎ. ಸುಬೈರ್ (52) ಮೃತಪಟ್ಟವರು. ತಾಯಿ ಬೀಫಾತಿಮರೊಂದಿಗೆ ಹಜ್‌ಗೆ ತೆರಳಿದ್ದರು. ಅಲ್ಲಿನ ಕ್ರಿಯೆಗಳನ್ನು ಪೂರ್ತಿ ಗೊಳಿಸಿದ ಬಳಿಕ ಎರಡು ವಾರದ ಹಿಂದೆ ರಕ್ತದೊತ್ತಡದ ಹಿನ್ನೆಲೆಯಲ್ಲಿ ಮೆದುಳಿಗೆ ಆಘಾತವುಂಟಾಗಿ ಮಕ್ಕಾದ ಅಲ್ನೂರ್ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಇವರ ಅಸೌಖ್ಯ ಗಂಭೀರವಾದ ಹಿನ್ನೆಲೆಯಲ್ಲಿ ಸಹೋದರ ರಶೀದ್ ಎರಡು ದಿನದ ಹಿಂದೆ ಮಕ್ಕಾಗೆ ತೆರಳಿದ್ದರು. ನಿನ್ನೆ ಸಂಜೆ ಸಂಬಂಧಿಕರಿಗೆ ಮರಣ ಮಾಹಿತಿ ಲಭಿಸಿದೆ. ಮೃತದೇಹದ ಅಂತ್ಯಕ್ರಿಯೆ ಅಲ್ಲಿಯೇ ನಡೆಸಲಾಗುವುದೆಂದು ಸಂಬಂಧಿಕರು ತಿಳಿಸಿದ್ದಾರೆ.
ಕಾಸರಗೋಡು ಮಾರ್ಕೆಟ್ ರಸ್ತೆಯಲ್ಲಿ ಸುಗಂಧ ದ್ರವ್ಯಗಳ ವ್ಯಾಪಾರಿಯಾಗಿದ್ದರು. ಈ ಮೊದಲು ಅಬುದಾಬಿಯಲ್ಲಿದ್ದರು. ಮೃತರು ಪತ್ನಿ ಫಮೀದ, ಮಕ್ಕಳಾದ ಅಶ್ಪಾನ್, ಬಾಸಿಮ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.