ಮಗಳ ಮನೆಗೆ ತೆರಳುತ್ತಿದ್ದ ತಂದೆ ಮೀನು ಲಾರಿ ಢಿಕ್ಕಿ ಹೊಡೆದು ಮೃತ್ಯು
ಕುಂಬಳೆ: ಮಗಳ ಮನೆಗೆ ತೆರಳುತ್ತಿದ್ದ ತಂದೆ ಮೀನು ಲಾರಿ ಢಿಕ್ಕಿ ಹೊಡೆದು ಮೃತಪಟ್ಟ ದಾರುಣ ಘಟನೆ ನಡೆದಿದೆ.
ಪಾವೂರು ಕೆದುಂಬಾಡಿ ನಿವಾಸಿ ಬಿ.ಎಂ. ಮೊಹಮ್ಮದ್ (೬೫) ಎಂಬವರು ಮೃತಪಟ್ಟ ದುರ್ದೈವಿಯಾಗಿ ದ್ದಾರೆ. ಇವರು ಮೊನ್ನೆ ಮಧ್ಯಾಹ್ನ ಕಾಸರಗೋಡಿನಲ್ಲಿರುವ ಮಗಳ ಮನೆಗೆ ತನ್ನ ಸ್ಕೂಟರ್‌ನಲ್ಲಿ ತೆರಳುತ್ತಿದ್ದಾಗ ಕುಂಬಳೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಜುಮಾ ಮಸೀದಿ ಮುಂಭಾಗ ಮೀನು ಲಾರಿ ಢಿಕ್ಕಿ ಹೊಡೆದಿದೆ. ಇದರಿಂದ ಗಂಭೀರಗಾಯಗೊಂಡ ಅವರನ್ನು ಸ್ಥಳೀಯರು ಕೂಡಲೇ ಕುಂಬಳೆಯ ಜಿಲ್ಲಾ ಸಹಕಾರಿ ಆಸ್ಪತ್ರೆಗೆ ತಲುಪಿಸಿದ್ದರು. ಆದರೆ ಸ್ಥಿತಿ ಗಂಭೀರ ವಾಗಿದ್ದುದರಿಂದ ಮಂಗಳೂರಿನ ಆಸ್ಪತ್ರೆಗೆ ಕೊಂಡೊಯ್ಯುತ್ತಿದ್ದಂತೆ ದಾರಿ ಮಧ್ಯೆ ನಿಧನ ಸಂಭವಿಸಿದೆ.
ಮೊಹಮ್ಮದ್‌ರ ಪತ್ನಿ ಆಯಿಶಾ ಮೂರು ತಿಂಗಳ ಹಿಂದೆ ನಿಧನ ಹೊಂದಿದ್ದಾರೆ. ಮೃತರು ಪುತ್ರಿ ಆಸ್ಮಿಯ, ಸಹೋದರ-ಸಹೋ ದರಿಯರಾದ ಹನೀಫ, ನಾಸರ್, ನಫೀಸ, ಕುಂಞಾಮಿನ, ಮರಿ ಯುಮ್ಮ, ಸುಹರಾ, ಫರೀದ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಅಪಘಾತ ಸಂಬಂಧ ಕುಂಬಳೆ ಪೊಲೀಸರು ಕೇಸು ದಾಖಲಿಸಿ ಲಾರಿಯನ್ನು ಕಸ್ಟಡಿಗೆ ತೆಗೆದುಕೊಂಡಿದ್ದಾರೆ.