ಮಗುವಿಗೆ ಜನ್ಮ ನೀಡಿದ 17ರ ಬಾಲಕಿ; ಕುಂಬ್ಡಾಜೆ ನಿವಾಸಿ ಯುವಕ ಪೋಕ್ಸೋ ಪ್ರಕಾರ ಬಂಧನ : ಮಗುವನ್ನು ಅನಾಥಾಲಯಕ್ಕೆ ಹಸ್ತಾಂತರಿಸಲಿರುವ ಪ್ರಯತ್ನ ವಿಫಲ
ಬದಿಯಡ್ಕ: ಲೈಂಗಿಕ ದೌರ್ಜನ್ಯಕ್ಕೊಳ ಗಾದ 17ರ ಹರೆಯದ ಬಾಲಕಿ ಮಗುವಿಗೆ ಜನ್ಮ ನೀಡಿದ ಘಟನೆ ನಡೆದಿದೆ. ಈ ವಿಷಯ ವನ್ನು ಗುಟ್ಟಾಗಿರಿಸಿ ಮಗುವನ್ನು ಅನಾಥಾಲ ಯಕ್ಕೆ ಹಸ್ತಾಂತರಿಸಲಿರುವ ಪ್ರಯತ್ನದ ಮಧ್ಯೆ ಈ ಘಟನೆ ಬೆಳಕಿಗೆ ಬಂದಿದೆ. ಬಾಲಕಿ ಗರ್ಭಿಣಿಯಾಗಲು ಕಾರಣಕರ್ತನಾದ ರಕ್ತಸಂಬಂ ಧವಿರುವ ಯುವಕನನ್ನು ಬದಿಯಡ್ಕ ಪೊಲೀಸರು ಪೋಕ್ಸೋ ಪ್ರಕಾರ ಬಂಧಿಸಿದ್ದಾರೆ.
ಕುಂಬ್ಡಾಜೆ ಪಂಚಾಯತ್ ವ್ಯಾಪ್ತಿಯ ನಿವಾಸಿಯೂ ಪತ್ನಿ ಹಾಗೂ ಮೂವರು ಮಕ್ಕಳಿರುವ 39 ರ ಹರೆಯದ ಯುವಕ ಸೆರೆಗೀ ಡಾಗಿದ್ದಾನೆ. ಆರೋಪಿ ಬದಿಯಡ್ಕ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಾಸಿಸುವ ಬಾಲಕಿಯ ತಾಯಿಯ ಹತ್ತಿರ ಸಂಬಂಧಿಕನಾಗಿದ್ದಾನೆ. ಪ್ಲಸ್‌ಟು ಮುಗಿಸಿದ ಬಳಿಕ ಬಾಲಕಿ ಮನೆಯಲ್ಲೇ ಇದ್ದಳು. ಈಮಧ್ಯೆ ಯುವಕ ಆಕೆಗೆ ದೌರ್ಜನ್ಯಗೈದಿದ್ದಾನೆನ್ನಲಾಗಿದೆ. ಬಳಿಕ ಹೊಟ್ಟೆ ನೋವು ಅನುಭವಗೊಂಡ ಹಿನ್ನೆಲೆಯಲ್ಲಿ ಬಾಲಕಿ ಖಾಸಗಿ ಆಸ್ಪತ್ರೆಯಿಂದ ಚಿಕಿತ್ಸೆ ಪಡೆದಿದ್ದಾಳೆ. ಈ ವೇಳೆ ತಪಾಸಣೆ ನಡೆಸಿದ ವೈದ್ಯರು ಬಾಲಕಿಯನ್ನು ಸ್ಕ್ಯಾನಿಂಗ್‌ಗೊಳಪಡಿ ಸಬೇಕೆಂದು ತಿಳಿಸಿದ್ದರು. ಹಾಗಾದಲ್ಲಿ ವಿಷಯ ಬಹಿರಂಗಗೊಳ್ಳಲಿದೆಯೆಂದು ತಿಳಿದು ಅಲ್ಲಿಂದ ಮರಳಿ ಬೇರೊಂದು ಆಸ್ಪತ್ರೆಯಲ್ಲಿ ಬಾಲಕಿಗೆ ಚಿಕಿತ್ಸೆ ನೀಡಲಾಯಿತು. ಅಲ್ಲಿ ನಡೆಸಿದ ತಪಾಸಣೆ ವೇಳೆ ಬಾಲಕಿ ಗರ್ಭಿಣಿ ಯಾಗಿದ್ದಾ ಳೆಂಬ ಸೂಚನೆ ಲಭಿಸಿದೆ. ಈ ವೇಳೆ ಬಾಲಕಿಗೆ ೧೯ ವರ್ಷ ಪ್ರಾಯವಿದೆಯೆಂದೂ ವಿವಾಹಿತೆ ಯೆಂದು ತಿಳಿಸಿದುದರಿಂದ ಆಸ್ಪತ್ರೆ ಅಧಿಕಾರಿಗಳಿಗೆ ಸಂಶಯವುಂಟಾಗಲಿಲ್ಲ. ಆದರೆ ಅನಂತರ ಪ್ರಸ್ತುತ ಆಸ್ಪತ್ರೆಗೆ ಚಿಕಿತ್ಸೆಗಾಗಿ ತೆರಳದೆ ತಾಯಿಯ ಹತ್ತಿರದ ಸಂಬಂಧಿಕನ ಸಹಾಯದೊಂದಿಗೆ ಕಾಞಂಗಾ ಡ್‌ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ತೆರಳಿದರು. ಬಾಲಕಿ ಗರ್ಭಿಣಿಯಾಗಿದ್ದಾಳೆಂಬ ವಿಷಯ ಬಹಿರಂಗ ಗೊಳ್ಳದಿರಲು ಬೇಕಲ ಪೊಲೀಸ್ ಠಾಣೆ ವ್ಯಾಪ್ತಿಯ ಒಂದು ಕ್ವಾರ್ಟರ್ಸ್‌ಗೆ ವಾಸ ಬದಲಿಸಲಾಯಿತು.
ಜುಲೈ ತಿಂಗಳಲ್ಲಿ ಬಾಲಕಿ ಗಂಡು ಮಗುವಿಗೆ ಕಾಞಂಗಾಡ್‌ನ ಖಾಸಗಿ ಆಸ್ಪತ್ರೆಯಲ್ಲಿ ಜನ್ಮ ನೀಡಿದಳು. ಪ್ರಾಯಪೂರ್ತಿ ಯಾಗಿದೆಯೆಂದು ತಿಳಿಸಿದ ಹಿನ್ನೆಲೆಯಲ್ಲಿ ಆಸ್ಪತ್ರೆ ಅಧಿಕಾರಿಗಳು ಕೂಡಾ ವಿಷಯವನ್ನು ಬಹಿರಂಗಪಡಿಸಿಲ್ಲ. ಆಸ್ಪತ್ರೆಯಿಂದ ಬಿಡುಗಡೆಗೊಂಡು ಮರಳಿ ಮನೆಗೆ ತಲುಪಿದ ಬಳಿಕ ಮಗುವನ್ನು ಉಪೇಕ್ಷಿಸಲು ನಿರ್ಧರಿಸಲಾಯಿತು. ಆದರೆ ಅದರಿಂದ ತೊಂದರೆಯಾಗ ಲಿದೆಯೇ ಎಂಬ ಭಯದಿಂದ ಮಗುವನ್ನು ಯಾವುದಾದರೂ ಅನಾಥಾಲಯಕ್ಕೆ ನೀಡಲು ತೀರ್ಮಾನಿಸಲಾಯಿತು. ಇದರಂತೆ ಬಾಲಕಿಯ ಮನೆಯವರು ಮಗುವಿನೊಂದಿಗೆ ತಲಶ್ಶೇರಿಯ ಅನಾಥಾಲಯವನ್ನು ಸಮೀಪಿಸಿದ್ದರು. ಈ ವೇಳೆ ಸಂಶಯಗೊಂಡ ಅನಾಥಾಲಯದ ಅಧಿಕಾರಿಗಳು ಚೈಲ್ಡ್ ವೆಲ್ಫೇರ್ ಕಮಿಟಿಗೆ ವಿಷಯ ತಿಳಿಸಿದರು. ಕೂಡಲೇ ಅವರು ಅಲ್ಲಿಗೆ ಅಧಿಕಾರಿಗಳು ತಲುಪಿದ್ದು ಮಗುವನ್ನು ಹಸ್ತಾಂತರಿಸಲು ನಿರ್ಧರಿಸಿರುವ ಬಗ್ಗೆ ಅವರಿಗೂ ಸಂಶಯ ಹುಟ್ಟಿಕೊಂಡಿತು. ಅನಂತರ ಸಿಡಬ್ಲ್ಯುಸಿ ತಲಶ್ಶೇರಿ ಪೊಲೀಸರಿಗೆ ಮಾಹಿತಿ ನೀಡಿದೆ. ಪ್ರಾಥಮಿಕ ಮಾಹಿತಿಗಳನ್ನು ಸಂಗ್ರಹಿಸಿದ ಬಳಿಕ ತಲಶ್ಶೇರಿ ಪೊಲೀಸರು ಬದಿಯಡ್ಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅನಂತರ ಬಾಲಕಿಯಿಂದ ಹೇಳಿಕೆ ದಾಖಲಿಸಿಕೊಂಡು ತಾಯಿಯ ಹತ್ತಿರದ ಸಂಬಂಧಿಕನಾದ ಯುವಕನ ವಿರುದ್ಧ ಪೋಕ್ಸೋ ಪ್ರಕಾರ ಕೇಸು ದಾಖಲಿಸಿ ಆತನನ್ನು ಬಂಧಿಸಲಾಯಿತು.