‘ಮಣಿಪುರ ಗಲಭೆಕೋರರಿಗೆ ಚೀನಾ, ಪಾಕಿಸ್ತಾನ ಸಹಾಯ’
ದಿಲ್ಲಿ: ಮಣಿಪುರ್‌ನಲ್ಲಿ ಗಲಭೆ ಸೃಷ್ಟಿಸುವವರಿಗೆ ಚೀನಾ ಹಾಗೂ ಪಾಕಿಸ್ತಾನದ ಸಹಾಯ ಲಭಿಸುತ್ತಿದೆ ಯೆಂದು ಅಸ್ಸಾಂ ರೈಫಲ್ಸ್‌ನ ಮಾಜಿ ಡಿ.ಜಿ ಲೆಫ್ಟಿನೆಂಟ್ ಜನರಲ್ ಡಾ. ಪಿ.ಸಿ. ನಾಯರ್ ತಿಳಿಸಿದ್ದಾರೆ.
ಗಲಭೆ ಸೃಷ್ಟಿಸುವವರಿಗೆ ಚೀನಾ ಹಾಗೂ ಪಾಕಿಸ್ತಾನ ಆರ್ಥಿಕ ಸಹಾಯ ಹಾಗೂ ಆಯುಧಗಳನ್ನು ನೀಡುತ್ತಿದೆ. ಅದರ ಜೊತೆಗೆ ಮಾದಕವಸ್ತುಗಳ ಸಾಗಾಟವೂ ನಡೆಯುತ್ತಿದೆಯೆಂದು ಖಾಸಗಿ ಟಿವಿ ಚಾನೆಲ್‌ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ತಿಳಿಸಿದ್ದಾರೆ.
ರಾಜ್ಯ ಸರಕಾರ ಎಲ್ಲರನ್ನೂ ಸೇರಿಸಿ ಚರ್ಚೆ ನಡೆಸಿದರೆ ಶಾಂತಿ ಮರುಸ್ಥಾಪಿಸಬಹುದೆಂದೂ ಅವರು ಅಭಿಪ್ರಾಯಪಟ್ಟಿದ್ದಾರೆ.