ಮತಾಂತರ, ಮಾನವ ಕಳ್ಳ ಸಾಗಾಟದ ಆರೋಪದಂತೆ ಫತ್ತೀಸ್‌ಘಡ್‌ನಲ್ಲಿ ಕೇರಳದ ಇಬ್ಬರು ಕ್ರೈಸ್ತ ಭಗಿನಿಯರ ಸೆರೆ; ಕೇರಳದ ಸಂಸದರಿಂದ ಸಂಸತ್‌ನಲ್ಲಿ ಪ್ರತಿಭಟನೆ
ನವದೆಹಲಿ: ಮತಾಂತರಗೊಳಿಸ ಲೆತ್ನ ಹಾಗೂ ಮಾನವ ಕಳ್ಳ ಸಾಗಾಟದ ಆರೋಪದಂತೆ ಕೇರಳದ ಇಬ್ಬರು ಕ್ರೈಸ್ತ ಭಗಿನಿಯರನ್ನು ಛತ್ತೀಸ್‌ಘಡ್‌ನಲ್ಲಿ ಅಲ್ಲಿನ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನದಲ್ಲಿರಿಸಿರುವುದನ್ನು ಪ್ರತಿಭಟಿಸಿ ಕೇರಳದ ಸಂಸದರು ಇಂದು ಬೆಳಿಗ್ಗೆ ಸಂಸತ್‌ನ ಹೊರಗೆ ತೀವ್ರ ಪ್ರತಿಭಟನೆ ನಡೆಸಿದರು. ಮಾತ್ರವಲ್ಲ ಸದನದ ಇಂದಿನ ಎಲ್ಲಾ ಕಲಾಪಗಳನ್ನು ಬದಿಗಿರಿಸಿ ಕ್ರೈಸ್ತ ಭಗಿನಿಯರ ಬಂಧನದ ಬಗ್ಗೆ ಸಮಗ್ರ ಚರ್ಚೆ ನಡೆಸಬೇಕೆಂದು ಆಗ್ರಹಿಸಿ ಇಂಡಿಯಾ ಒಕ್ಕೂಟದ ಕೇ ರಳದ ಸಂಸದರು ಮತ್ತು ಸಿಪಿಎಂ ಸಂಸದರು ಸಂಸತ್‌ನಲ್ಲಿ ಇಂದು ತುರ್ತು ಗೊತ್ತುವಳಿ ಮಂಡಿಸಿದ್ದಾರೆ. ಮಾತ್ರವಲ್ಲ ಅವರು ಸಂಸತ್‌ನ ದ್ವಾರದ ಬಳಿ ಪ್ರತ್ಯೇಕ ಪ್ರತ್ಯೇಕ ಜಮಾಯಿಸಿ ಬಂಧಿಸಲ್ಪಟ್ಟ ಭಗಿನಿಯರನ್ನು ಶೀಘ್ರ ಬಿಡುಗಡೆಗೊಳಿಸುವಂತೆಯೂ ಆಗ್ರಹಿಸಿ ಘೋಷಣೆ ಮೊಳಗಿಸಿದರು. ಆದರೆ ಈ ವಿಷಯದಲ್ಲಿ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಲು ಕೇರಳದ ಕೇಂದ್ರ ಸಚಿವ ಜೋರ್ಜ್ ಕುರ್ಯನ್ ಆಗಲೀ, ಇತರ ಬಿಜೆಪಿ ನೇತಾರರಾಗಲೀ ತಯಾರಾಗಲಿಲ್ಲ. ಕಣ್ಣೂರಿನ ಉದಯಗಿರಿಯ ಸಿಸ್ಟರ್ ವಂದನಾ ಫ್ರಾನ್ಸಿಸ್ ಮತ್ತು ಅಂಗಮಾಲಿ ವಾಳಾವೂರಿನ ಸಿಸ್ಟರ್ ಪ್ರೀತಿ ಮೇರಿ ಎಂಬವರನ್ನು ಛತ್ತೀಸ್‌ಘಡದ ದುರ್ಗಾ ರೈಲು ನಿಲ್ದಾಣದಲ್ಲಿ ಭಜರಂಗದಳದ ಕಾರ್ಯಕರ್ತರು ಮೊದಲು ತಡೆಹಿಡಿ ದರು. ನಂತರ ಅವರನ್ನು ಛತ್ತೀಸ್‌ಘಡ ಪೊಲೀಸರು ಆಗಮಿಸಿ ಬಂಧಿಸಿ ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ. ಇನ್ನೊಂದೆಡೆ ಬಂಧಿತ ಭಗಿನಿಯರಿಗೆ ನ್ಯಾಂii ದೊರಕಿಸಿಕೊಡಲು ತುರ್ತಾಗಿ ಮಧ್ಯೆ ಪ್ರವೇಶಿಸುವಂತೆ ಆಗ್ರಹಿಸಿ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪ್ರಧಾನಿ ನರೇಂದ್ರಮೋದಿಗೆ ಪತ್ರ ಬರೆದಿದ್ದಾರೆ. ಮಾತ್ರವಲ್ಲ ಭಗಿನಿಯರ ಬಂಧನವನ್ನು ಪ್ರತಿಭಟಿಸಿ ಝೀರೋ ಮಲಬಾರ್ ಸಭೆ ಮತ್ತು ಕೆಸಿಬಿಸಿ ಜಾಗ್ರತಾ ಕಮಿಶನ್ ಕೂಡಾ ಇನ್ನೊಂದೆಡೆ ಪ್ರತಿಭಟನೆಯೊಂದಿಗೆ ರಂಗಕ್ಕಿಳಿದಿದೆ.