ಮತೀಯ ಉಗ್ರಗಾಮಿಗಳಿಂದ ಕೇರಳವನ್ನು ಮುಕ್ತಗೊಳಿಸಲು ಬಿಜೆಪಿ ಸರಕಾರಕ್ಕೆ ಮಾತ್ರ ಸಾಧ್ಯ-ಕೆ. ಸುರೇಂದ್ರನ್

ತಿರುವನಂತಪುರ: ಕೇರಳವನ್ನು ಮಹಾ ಉಗ್ರಗಾಮಿಗಳ ಕೈಯಿಂದ ಮುಕ್ತಗೊಳಿಸಲು ನರೇಂದ್ರಮೋದಿ ನೇತೃತ್ವದ ಎನ್‌ಡಿಎ ಸರಕಾರದಿಂದ ಮಾತ್ರವೇ ಸಾಧ್ಯವಾಗಲಿದೆಯೆಂದು ಬಿಜೆಪಿ ರಾಜ್ಯ ಅಧ್ಯಕ್ಷ ಕೆ. ಸುರೇಂ ದ್ರನ್ ಹೇಳಿದ್ದಾರೆ. ಪೂಂಞಂನಲ್ಲಿ ಕ್ರೈಸ್ತ ಧರ್ಮ ಗುರುವಿನ ಮೇಲೆ ಇತ್ತೀಚೆಗೆ ನಡೆಸ ಲಾದ ದಾಳಿ ಮತ್ತು ಆಟ್ಟುಕ್ಕಾಲ್ ಪೊಂಗಾಲ ಮಹೋತ್ಸವದ ವಿರುದ್ಧ ನಡೆದ  ಹೇಟ್ ಕ್ಯಾಂಪೈನ್ (ದ್ವೇಷ ಅಭಿಯಾನ)ದ ಹಿಂದೆ ಮತೀಯ ಉಗ್ರಗಾಮಿಗಳ ಕೈವಾಡ ಅಡಗಿದೆ. ಕೇರಳದ ಎಡರಂಗ ಮತ್ತು ಐಕ್ಯರಂ ಗಗಳು ಮತೀಯ ಉಗ್ರಗಾಮಿ ಸಂಘ ಟನೆಗಳ ಬೆಂಬಲ ಹೊಂದಿದೆಯೆಂದೂ ಸುರೇಂದ್ರನ್ ಆರೋಪಿಸಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಕೇರಳದ ಹಲವು ಲೋಕಸಭಾ ಕ್ಷೇತ್ರಗಳಲ್ಲಿ ಎನ್‌ಡಿಎ ಗೆದ್ದುಕೊಳ್ಳಲಿದೆಯೆಂಬ ನಿರೀಕ್ಷೆಯನ್ನು ಸುರೇಂದ್ರನ್ ವ್ಯಕ್ತಪಡಿಸಿದ್ದಾರೆ.

You cannot copy contents of this page