ಮತ್ತೆ ಆತಂಕ ಹುಟ್ಟಿಸಿದ ಅಮೀಬಿಕ್ ಮೆದುಳು ಜ್ವರ: ತಳಿಪರಂಬ ಸರೋವರದಲ್ಲಿ ಸ್ನಾನ ಮಾಡಿದ ಮಗುವಿಗೆ ರೋಗ ಪತ್ತೆ

ಕಲ್ಲಿಕೋಟೆ: ಕಲ್ಲಿಕೋಟೆಯಲ್ಲಿ ಮತ್ತೆ ಅಮೀಬಿಕ್ ಮೆದುಳು ಜ್ವರ ಭೀತಿ ಹೆಚ್ಚಿಸಿದೆ. ಅಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿರುವ ಮೂರೂವರೆ ವರ್ಷ ಪ್ರಾಯದ ಬಾಲಕನಿಗೆ ಅಮೀಬಿಕ್ ಮೆದುಳುಜ್ವರ ಬಾಧಿಸಿರುವುದು ಖಚಿತಪಡಿಸಲಾಗಿದೆ. ಪಾಂಡಿಚ್ಚೇರಿಯಲ್ಲಿ ನಡೆಸಿದ ಪಿಸಿಆರ್ ತಪಾಸಣೆಯಲ್ಲಿ ರೋಗ ದೃಢೀಕರಿಸಲಾಗಿದೆ.  ತಳಿಪರಂಬದ ಸರೋವರದಲ್ಲಿ ಸ್ನಾನ ಮಾಡಿದ ಬಳಿಕ ಮಗುವಿಗೆ ರೋಗ ಲಕ್ಷಣಗಳು ಕಂಡುಬಂದಿದೆ. ಇದರಿಂದ  ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ದಾಖಲಿಸಿದ ಮಗುವನ್ನು ಕಳೆದ ಶನಿವಾರ ಕಲ್ಲಿಕೋಟೆಯ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾ ಗಿತ್ತು. ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಗು ಔಷಧಿಗಳಿಗೆ  ಸ್ಪಂದಿಸುತ್ತಿದೆಯೆಂದು ವೈದ್ಯರು ತಿಳಿಸಿದ್ದಾರೆ. ಇದೇ ವೇಳೆ ಇನ್ನೊಂದು ಮಗು  ಕೂಡಾ ಅಮೀಬಿಕ್ ಮೆದುಳು ಜ್ವರ ಲಕ್ಷಣಗಳೊಂದಿಗೆ ಕಲ್ಲಿಕೋಟೆ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದೆ. ಕಲ್ಲಿಕೋಟೆ ನಿವಾಸಿಯಾದ ನಾಲ್ಕರ ಹರೆ ಯದ ಬಾಲಕನಿಗೆ ಈ ರೋಗ ಬಾಧಿಸಿದೆ.

ಈ ಮಗುವಿನ ತಪಾಸಣಾ ವರದಿ ಇಂದು ಲಭಿಸಲಿದೆ. ಅಮೀಬಿಕ್ ಮೆದುಳು ಜ್ವರ ಬಾಧಿಸಿ ಚಿಕಿತ್ಸೆಯಲ್ಲಿದ್ದ ೧೪ ವರ್ಷದ ಬಾಲಕ ಅಫ್ನಾನ್ ಎಂಬಾತ ಇತ್ತೀಚೆಗೆ ರೋಗ ವಾಸಿಯಾಗಿ ಮನೆಗೆ ಮರಳಿದ್ದಾನೆ.  

RELATED NEWS

You cannot copy contents of this page