ಮತ್ತೆ ಆನ್‌ಲೈನ್ ವಂಚನೆ: ಕುಂಬಳೆಯಲ್ಲಿ ಯುವಕನ 1.30 ಲಕ್ಷ ರೂಪಾಯಿ ಲಪಟಾವಣೆ

ಕುಂಬಳೆ: ಆನ್ ಲೈನ್ ವಂಚನೆ ವಿರುದ್ಧ ಜಾಗ್ರತೆ ಪಾಲಿಸಬೇಕೆಂದು ಪೊಲೀಸರು ಮುನ್ನೆಚ್ಚರಿಕೆ ನೀಡುತ್ತಿ ರುವಾಗಲೂ ವಂಚನೆ ಪ್ರಕರಣಗಳು ಪುನರಾವರ್ತಿಸುತ್ತಿದೆ. ಕುಂಬಳೆಯಲ್ಲಿ ಈ ರೀತಿಯಲ್ಲಿ ಯುವಕನ 1.30 ಲಕ್ಷ ರೂಪಾಯಿ ನಷ್ಟಗೊಂಡಿರು ವುದಾಗಿ ದೂರವಾಗಿದೆ. ಬದ್ರಿಯಾನಗ ರದ ಅಬ್ದುಲ್ ಮಿಶಾಲ್  ಎಂಬವರು ಹಣ ಕಳೆದುಕೊಂಡ ವ್ಯಕ್ತಿಯಾಗಿ ದ್ದಾರೆ. ಇವರು ನೀಡಿದ ದೂರಿನಂತೆ ಕುಂಬಳೆ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ.  ಫೇಸ್ ಬುಕ್ ಮೂಲಕ ಪರಿಚಯ ಗೊಂಡ ತಿರುವನಂತಪುರ ನೈಯ್ಯಾಟಿಂ ಗರ ನಿವಾಸಿಯಾದ ಆನಂದ್ ವಿಸ್ಮಯ ಎಂಬ ವ್ಯಕ್ತಿ ಹಣ ಲಪಟಾ ಯಿಸಿರುವುದಾಗಿ ದೂರಲಾಗಿದೆ. ಟೈಟಾನ್ ಕಂಪೆನಿಯಲ್ಲಿ ಹಣ ಠೇವಣಿಯಿರಿಸಿದರೆ ಭಾರೀ ಲಾಭ ಲಭಿಸಬಹುದೆಂದು ನಂಬಿಸಿ 2023 ಡಿಸೆಂಬರ್ 13, 14ರಂದು ಹಣ ಪಡೆದುಕೊಂಡಿರುವುದಾಗಿ ಅಬ್ದುಲ್ ಮಿಶಾಲ್ ನೀಡಿದ ದೂರಿನಲ್ಲಿ ತಿಳಿಸ ಲಾಗಿದೆ.

ಇದೇ ವೇಳೆ ಆನ್‌ಲೈನ್ ವಂಚನೆಗಳು ವ್ಯಾಪಕಗೊಳ್ಳು ತ್ತಿರುವುದು ಸಾರ್ವಜನಿಕರಲ್ಲಿ ಆತಂಕಕ್ಕೆ ಕಾರಣವಾಗಿದೆ. ಪ್ರತಿ ದಿನ  ವಂಚನೆ ಗೀಡಾಗುವವರು ದೂರುಗಳೊಂದಿಗೆ ಪೊಲೀಸರನ್ನು ಸಮೀಪಿಸುತ್ತಿದ್ದಾರೆ.  ವಂಚನೆಗಾರರ ವಿರುದ್ಧಜಾಗ್ರತೆ ಪಾಲಿಸಬೇಕೆಂದೂ, ಆನ್‌ಲೈನ್ ವಂಚನೆಗಳು ಗಮನಕ್ಕೆ ಬಂದಲ್ಲಿ 1930 ಎಂಬ ಟೋಲ್ ಫ್ರೀ ನಂಬ್ರದಲ್ಲಿ ತಿಳಿಸಬೇಕೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ಬಿಜೋಯ್ ತಿಳಿಸಿದ್ದಾರೆ. ಒಂದು ಗಂಟೆಯೊಳಗೆ ಈ ನಂಬ್ರದಲ್ಲಿ ಕರೆ ಮಾಡಿದರೆ ಜನರ ಹಣ ನಷ್ಟಗೊಳ್ಳುವುದನ್ನು ತಪ್ಪಿಸಬ ಹುದೆಂದು ಅವರು ತಿಳಿಸಿದ್ದಾರೆ.

You cannot copy contents of this page