ಮತ್ತೆ ಕಾಡಾನೆ ಆಕ್ರಮಣ:ವಯನಾಡಿನಲ್ಲಿ ಯುವಕನಿಗೆ ಜೀವಹಾನಿ
ಕಲ್ಪೆಟ್ಟ: ವಯನಾಡಿನಲ್ಲಿ ಮತ್ತೆ ಕಾಡಾನೆ ಆಕ್ರಮಣ ನಡೆಸಿದೆ. ಇದರಲ್ಲಿ ಯುವಕ ದಾರುಣವಾಗಿ ಮೃತಪಟ್ಟಿದ್ದಾರೆ. ಸುಲ್ತಾನ್ ಬತ್ತೇರಿ ನೂಲ್ಪುಳ ನಿವಾಸಿ ಮನು (25) ಮೃತಪಟ್ಟ ಯುವಕ. ನಿನ್ನೆ ರಾತ್ರಿ ಘಟನೆ ನಡೆದಿದೆ. ಅಂಗಡಿಗೆ ಪತ್ನಿ ಸಹಿತ ತೆರಳಿ ಹಿಂತಿರುಗುತ್ತಿದ್ದ ಮಧ್ಯೆ ಬಯಲು ಪ್ರದೇಶದಲ್ಲಿ ಕಾಡಾನೆ ಆಕ್ರಮಿಸಿದೆ. ಇವರಿಬ್ಬರು ನಾಪತ್ತೆಯಾದ ಹಿನ್ನೆಲೆಯಲ್ಲಿ ಹುಡುಕಾಟ ಆರಂಭಿಸಲಾಗಿತ್ತು. ಇಂದು ಬೆಳಿಗ್ಗೆ ಮನುರ ಮೃತದೇಹ ಕಂಡು ಬಂದಿದೆ. ಬಳಿಕ ಪತ್ನಿಗಾಗಿ ಹುಡುಕಾಡಿದ ಪೊಲೀಸರು ಆಕೆಯನ್ನು ಪತ್ತೆಹಚ್ಚಿ ಠಾಣೆಗೆ ತಲುಪಿಸಿದ್ದಾರೆ. ಮಾಹಿತಿ ತಿಳಿದು ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ತಲುಪಿದ್ದು, ಸ್ಥಳೀಯರು ಪ್ರತಿಭಟನಾ ನಿರತರಾಗಿದ್ದಾರೆ.
ಮೃತದೇಹವನ್ನು ಸ್ಥಳದಿಂದ ಕೊಂಡುಹೋಗಲು ಸ್ಥಳೀಯರು ಅವಕಾಶ ಇದುವರೆಗೆ ನೀಡಲಿಲ್ಲ.