ಮತ್ತೆ ದಾಖಲೆ ಸೃಷ್ಟಿಸಿದ ಚಿನ್ನದ ದರ
ಕಾಸರಗೋಡು: ರಾಜ್ಯದಲ್ಲಿ ಚಿನ್ನದ ಬೆಲೆ ಮತ್ತೆ ದಾಖಲೆಯತ್ತ ನೆಗೆದಿದೆ. ಪವನ್ಗೆ 160 ರೂಪಾಯಿ ಹೆಚ್ಚಳವಾಗುವು ದರೊಂ ದಿಗೆ ಇಂದಿನ ದರ 75,200 ರೂ. ಆಗಿದೆ. ಒಂದು ಗ್ರಾಂ ಚಿನ್ನದ ದರ 9,400ರೂಪಾಯಿ.
ಕಳೆದ ತಿಂಗಳ 23ರಂದು 75 ಸಾವಿರ ರೂಪಾಯಿ ದಾಟಿ ದಾಖಲೆ ನಿರ್ಮಿಸಿದ ಚಿನ್ನದ ಬೆಲೆ ಅನಂತರದ ದಿನಗಳಲ್ಲಿ ಕಡಿಮೆ ಯಾಗಿತ್ತು. 74 ಸಾವಿರಕ್ಕಿಂತಲೂ ಕಡಿಮೆಯಾದ ಬೆಲೆ ಮೊನ್ನೆಯಿಂದ ಮತ್ತೆ ಏರತೊಡಗಿದೆ. ಅಗೋಸ್ತ್ 1ರಂದು ಪವನ್ಗೆ 73,200 ರೂ. ಆಗಿತ್ತು.
5 ದಿನಗಳ ಮಧ್ಯೆ 1800 ರೂ.ಗಳ ಹೆಚ್ಚಳವಾಗಿದೆ. 3 ಶೇ. ಜಿಎಸ್ಟಿ, 53.10ರೂ. ಹಾಲ್ ಮಾರ್ಕ್ ಶುಲ್ಕ,ಸರಾಸರಿ10 ಶೇ.ಮಜೂರಿ ಸೇರಿಸಿದರೆ ಇಂದು ಒಂದು ಪವನ್ ಚಿನ್ನ ಖರೀದಿಸಬೇಕಾದರೆ 85,000 ರೂ. ನೀಡಬೇಕಾಗಿದೆ. ಅಂತಾರಾಷ್ಟ್ರ ಮಾರುಕಟ್ಟೆಯಲ್ಲಿ ಉಂಟಾದ ಬದಲಾವಣೆಗಳು ಹಾಗೂ ಪ್ರಾದೇಶಿಕವಾಗಿ ಕಂಡು ಬರುವ ಬೇಡಿಕೆಯೇ ಚಿನ್ನದ ಬೆಲೆಯಲ್ಲಿ ಬದಲಾವಣೆ ಉಂಟಾಗಲು ಕಾರಣವಾಗಿದೆ.