ಮತ್ತೆ ಸಾರ್ವಕಾಲಿಕ ದಾಖಲೆ ಸೃಷ್ಟಿಸಿದ ಚಿನ್ನದ ದರ
ಕಾಸರಗೋಡು: ರಾಜ್ಯದಲ್ಲಿ ಚಿನ್ನದ ಬೆಲೆಯಲ್ಲಿ ಮತ್ತೆ ಸಾರ್ವಕಾಲಿಕ ದಾಖ ಲೆ ಸೃಷ್ಟಿಯಾಗಿದೆ. ಇಂದು ಪವನ್ಗೆ 560 ರೂಪಾಯಿ ಹೆಚ್ಚಳಗೊಂಡು 75,760 ರೂಪಾಯಿಗೆ ತಲುಪಿದೆ. ಗ್ರಾಂಗೆ 70 ರೂ.ಹೆಚ್ಚಿ 9,470 ರೂ.ಗೇರಿದೆ.ಈ ತಿಂಗಳ ಅತೀ ಹೆಚ್ಚಿನ ಚಿನ್ನದ ದರ ಇಂದು ದಾಖಲಾಗಿದೆ. ಕಳೆದ ಮೂರು ದಿನಗಳಲ್ಲಾಗಿ ಪವನ್ಗೆ 800 ರೂಪಾಯಿಗಳ ಹೆಚ್ಚಳವಾಗಿದೆ. ಅಗೋಸ್ತ್ 1ರಂದು ಈ ತಿಂಗಳ ಅತೀ ಕಡಿಮೆ ದರ ದಾಖಲಾಗಿತ್ತು. ಅಂದು ಪವನ್ಗೆ 73,200 ರೂ. ಆಗಿತ್ತು. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ರ ತೆರಿಗೆ ನೀತಿಯೇ ಭಾರತದಲ್ಲಿ ಚಿನ್ನದ ಬೆಲೆ ಮೇಲಕ್ಕೇರಲು ಕಾರಣವಾಗಿದೆ ಯೆಂದು ಹೇಳಲಾಗುತ್ತಿದೆ.