ಮದುವೆಯಾಗುವುದಾಗಿ ನಂಬಿಸಿ ಯುವತಿಗೆ ವಂಚನೆ: ಗಲ್ಫ್‌ಗೆ ಪರಾರಿಯಾಗಿದ್ದ ಆರೋಪಿ ಬಂಧನ

ಕಾಸರಗೋಡು: ಯುವತಿಯನ್ನು ಮದುವೆಯಾಗುವುದಾಗಿ ಭರವಸೆಯೊಡ್ಡಿ ಲೈಂಗಿಕ ಕಿರುಕುಳ ನೀಡಿದ ಬಳಿಕ ಮದುವೆಯಿಂದ ಹಿಂಜರಿದು ಗಲ್ಫ್‌ಗೆ ಪರಾರಿಯಾಗಿದ್ದ ಆರೋಪಿಯನ್ನು ಮುಂಬೈ ವಿಮಾನ ನಿಲ್ದಾಣದಿಂದ ಬಂಧಿಸಲಾಗಿದೆ.  ಉಪ್ಪಳ ಮಂಗಲ್ಪಾಡಿ ಪ್ರತಾಪನಗರ ನಿವಾಸಿ ಮುಹಮ್ಮದ್ ಅಶ್ರಫ್ (24) ಎಂಬಾತ ಬಂಧಿತ ಆರೋಪಿ ಯಾಗಿದ್ದಾನೆ.  ಹೊಸದುರ್ಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಾಸಿಸುವ ಯುವತಿಯನ್ನು ಮದುವೆಯಾಗುವುದಾಗಿ ಭರವಸೆಯೊಡ್ಡಿ ಈತ ಲೈಂಗಿಕ ಕಿರುಕುಳ ನೀಡಿದ್ದನೆನ್ನ ಲಾಗಿದೆ. ಅನಂತರ ಮದುವೆಯಿಂದ ಹಿಂಜರಿದ ಈತ ಗಲ್ಫ್‌ಗೆ  ತೆರಳಿದ್ದನು. ಕಿರುಕುಳ ಬಗ್ಗೆ ಯುವತಿ ನೀಡಿದ ದೂರಿನಂತೆ ಹೊಸದುರ್ಗ ಪೊಲೀಸರು ಕೇಸು  ದಾಖಲಿಸಿ ಆರೋಪಿಯ ಪತ್ತೆಗಾಗಿ ಲುಕೌಟ್ ನೋಟೀಸು ಹೊರಡಿಸಿ ದ್ದರು. ಈ ಮಧ್ಯೆ ಆರೋಪಿ ನಿನ್ನೆ ಗಲ್ಫ್‌ನಿಂದ ಮರಳಿ ಬಂದು ಮುಂಬೈ ವಿಮಾನ ನಿಲ್ದಾಣದಲ್ಲಿಳಿ ದಿದ್ದನು.  ಈತನನ್ನು ವಿಮಾನ ನಿಲ್ದಾಣ ಅಧಿಕಾರಿಗಳು ತಡೆದು ನಿಲ್ಲಿಸಿ ಹೊಸದುರ್ಗ ಪೊಲೀಸರಿಗೆ ಮಾಹಿತಿ ನೀಡಿದ್ದರು.  ಇದರಂತೆ  ಹೊಸದುರ್ಗ ಪೊಲೀಸರು ಮುಂಬೈಗೆ ತೆರಳಿ ಆರೋಪಿಯ ಬಂಧನ ದಾಖಲಿಸಿದ್ದಾರೆ.

You cannot copy contents of this page