ಮದ್ಯದಮಲಿನಲ್ಲಿ ಜಗಳ ನಡೆಸಿದ ಮಗನನ್ನು ಹೊಡೆದು ಕೊಂದ ತಂದೆ
ಇಡುಕ್ಕಿ: ತಂದೆ ಹಾಗೂ ಮಗನ ಮಧ್ಯೆ ನಡೆದ ಘರ್ಷಣೆ ವೇಳೆ ತಲೆಗೆ ಹೊಡೆತವುಂಟಾಗಿ ಮಗ ಸಾವಿಗೀಡಾದ ಘಟನೆ ಇಡುಕ್ಕಿಯಲ್ಲಿ ನಡೆದಿದೆ. ರಾಮಕ್ಕಲ್‌ಮೇಡ್ ಚಕ್ಕಕಾನಂ ಪುತ್ತನ್‌ವೀಟಿಲ್ ಗಂಗಾಧರನ್ (54) ಸಾವಿಗೀಡಾದ ವ್ಯಕ್ತಿ. ಈ ಸಂಬಂಧ ತಂದೆ ರವೀಂದ್ರನ್ ನಾಯರ್‌ನನ್ನು ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಮದ್ಯ ಸೇವಿಸಿ ಮನೆಗೆ ತಲುಪಿದ ಗಂಗಾಧರನ್ ನಾಯರ್ ತಂದೆಯೊಂದಿಗೆ ವಾಗ್ವಾದದಲ್ಲಿ ತೊಡಗಿದ್ದರು. ಈ ವೇಳೆ ರವೀಂದ್ರನ್ ಬೆತ್ತದಿಂದ ಮಗನಿಗೆ ಹಲ್ಲೆ ನಡೆಸಿದ್ದು, ಈ ವೇಳೆ ತಲೆಗೆ ಏಟು ತಗಲಿ ಗಂಗಾಧರನ್ ಪ್ರಜ್ಞೆ ತಪ್ಪಿ ಬಿದ್ದಿದ್ದನು. ವಿಷಯ ತಿಳಿದು ತಲುಪಿದ ಸ್ಥಳೀಯರು ಗಂಗಾಧರನ್‌ರನ್ನು ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ.