ಮದ್ಯದಮಲಿನಲ್ಲಿ ತಂದೆಯನ್ನು ಮೆಟ್ಟಿ ಕೊಂದ ಪುತ್ರ ಸೆರೆ
ಕೊಚ್ಚಿ: ಎರ್ನಾ ಕುಳಂನಲ್ಲಿ ಮದ್ಯದ ಮಲಿನಲ್ಲಿ ತಂದೆಯನ್ನು ಪುತ್ರ ಮೆಟ್ಟಿ ಕೊಲೆಗೈದಿ ದ್ದಾನೆ. ಪೆರುಂಬಾವೂರು ತೆಕ್ಕ್ತಲ ಮನೆಯ ಜೋನಿ (67) ಕೊಲೆಗೀಡಾದ ವ್ಯಕ್ತಿ. ಘಟನೆಯಲ್ಲಿ ಪುತ್ರ ಮೆಲ್ಜೋ (35)ನನ್ನು ಪೊಲೀಸರು ಬಂಧಿಸಿದ್ದಾರೆ. ಬುಧವಾರ ರಾತ್ರಿ ೯ ಗಂಟೆಗೆ ಘಟನೆ ನಡೆದಿದೆ. ತಂದೆ ಪ್ರಜ್ಞಾಹೀನನಾಗಿ ಬಿದ್ದಿರುವುದಾಗಿ ಮೆಲ್ಜೋ ಸಂಬಂಧಿಕರಿಗೆ ಹಾಗೂ ನೆರೆಮನೆಯವರಿಗೆ ತಿಳಿಸಿದ್ದನು. ಸಂಬಂಧಿಕರು ಸಹೋದರಿಗೆ ಮಾಹಿತಿ ನೀಡಿದ್ದು, ಅವರು ತಲುಪಿದ ಬಳಿಕ ಮೂವಾಟುಪುಳ ತಾಲೂಕು ಆಸ್ಪತ್ರೆಗೆ ದಾಖಲಿಸಲಾಯಿತು. ನಿನ್ನೆ ನಡೆದ ಪ್ರಾಥಮಿಕ ಮರಣೋತ್ತರ ಪರೀಕ್ಷೆಯಲ್ಲಿ ಜೋನಿಯ ಪಕ್ಕೆಲುಬುಗಳು ಮುರಿದಿರುವುದಾಗಿ ತಿಳಿದು ಬಂದಿತ್ತು. ಈ ವಿಷಯವನ್ನು ಪೆರುಂಬಾವೂರು ಪೊಲೀಸರಿಗೆ ತಿಳಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ನಡೆಸಿದ ತನಿಖೆಯಲ್ಲಿ ಪುತ್ರ ಮೆಲ್ಜೋ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಕೊಲೆ ಆರೋಪದಂತೆ ಈತನ ವಿರುದ್ಧ ಕೇಸು ದಾಖಲಿಸಿ ಬಂಧಿಸಲಾಗಿದೆ. ಆರೋಪಿ ನ್ಯಾಯಾಂಗ ಬಂಧನದಲ್ಲಿದ್ದಾನೆ.