ಮದ್ಯದ ಅಮಲಿನಲ್ಲಿ ಡೀಸೆಲ್ ಕುಡಿದ ಯುವಕ ಸಾವು
ಬದಿಯಡ್ಕ; ಮದ್ಯದ ಅಮಲಿನಲ್ಲಿ ಡೀಸೆಲ್ ಕುಡಿದು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಯುವಕ ಮೃತಪಟ್ಟನು.
ಚರ್ಲಡ್ಕ ಬಳಿಯ ಎರ್ಪಕಟ್ಟೆ ನಿವಾಸಿ ತಂಗಚ್ಚನ್ ಎಂಬವರ ಪುತ್ರ ರಾಜನ್ (35) ಮೃತಪಟ್ಟ ವ್ಯಕ್ತಿ. ನವಂಬರ್ ೧೫ರಂದು ರಾತ್ರಿ 8.30ರ ವೇಳೆ ರಾಜನ್ ಡೀಸೆಲ್ ಕುಡಿದಿದ್ದರೆನ್ನಲಾಗಿದೆ. ಇದರಿಂದ ಗಂಭೀರ ಅಸ್ವಸ್ಥಗೊಂಡ ಅವರನ್ನು ಕೂಡಲೇ ಕಾಸರಗೋಡು ಆಸ್ಪತ್ರೆಗೆ ತಲುಪಿಸಲಾಗಿತ್ತು. ಗಂಭೀರ ಸ್ಥಿತಿಯಲ್ಲಿದ್ದುದರಿಂದ ಬಳಿಕ ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಕೊಂಡೊಯ್ದು ದಾಖಲಿಸಲಾಗಿತ್ತು. ಆದರೂ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಅವರು ಮೃತಪಟ್ಟರು. ಘಟನೆ ಬಗ್ಗೆ ಬದಿಯಡ್ಕ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತರು ತಾಯಿ ಮೇರಿ, ಸಹೋದರ-ಸಹೋದರಿಯರಾದ ಆದಿತ, ಇಡಿಕ್ಕ ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.