ಮದ್ರಸಾ ಅಧ್ಯಾಪಕ ರಿಯಾಸ್ ಮೌಲವಿ ಕೊಲೆ ಪ್ರಕರಣ: ಆರೋಪಿಗಳ ಖುಲಾಸೆ

ಕಾಸರಗೋಡು: ಕಾಸರಗೋಡು ಜಿಲ್ಲೆಯನ್ನೇ ಭಾರೀ ಆತಂಕಕ್ಕೊಳ ಪಡಿಸಿದ ಕಾಸರಗೋಡು ಹಳೇ ಸೂರ್ಲಿನ ಮದ್ರಸಾ ಅಧ್ಯಾಪಕ ಮೂಲತಃ ಕೊಡಗು ನಿವಾಸಿ ಮೊಹಮ್ಮದ್ ರಿಯಾಸ್ ಮೌಲವಿ (೨೮) ಕೊಲೆ ಪ್ರಕರಣದ ಎಲ್ಲಾ ಆರೋಪಿಗಳನ್ನು  ಕಾಸರಗೋಡು ಪ್ರಿನ್ಸಿಪಲ್ ಜಿಲ್ಲಾ ಸೆಶನ್ಸ್ ನ್ಯಾಯಾಲಯ ಖುಲಾಸೆಗೊಳಿಸಿ ತೀರ್ಪು ನೀಡಿದೆ.

ರಿಯಾಸ್ ಮೌಲವಿಯವರನ್ನು ೨೦೧೭ ಮಾರ್ಚ್ ೨೦ರಂದು ರಾತ್ರಿ ಹಳೇ ಸೂರ್ಲುನ ಬಳಿಯಿರುವ ಅವರ ಕೊಠಡಿಗೆ  ಅಕ್ರಮವಾಗಿ ನುಗಿದ ಅಕ್ರಮಿಗಳ ತಂಡ ಇರಿದು ಬರ್ಬರವಾಗಿ ಕೊಲೆಗೈದಿತ್ತು. ಕೇಳುಗುಡ್ಡೆ ಪರಿಸರ ನಿವಾಸಿ ನಿತಿನ್ (೧೯), ಕೇಳುಗುಡ್ಡೆ ಗಂಗೈ ಕುಟೀರದ ಅಖಿಲೇಶ್ ಅಲಿಯಾಸ್ ಅಖಿಲ್  (೨೫) ಮತ್ತು ಕೇಳುಗುಡ್ಡೆ ಅಯ್ಯಪ್ಪ ಭಜನಾ ಮಂದಿರ ಸಮೀಪದ ಅಜೇಶ್ ಅಲಿಯಾಸ್ ಅಪ್ಪು (೨೦) ಈ ಕೊಲೆ ಪ್ರಕರಣದ ಆರೋಪಿಗಳಾಗಿದ್ದು, ಅವರನ್ನು ನ್ಯಾಯಾಲಯ ಖುಲಾಸೆಗೊಳಿಸಿ ತೀರ್ಪು ನೀಡಿದೆ.

ವಿಚಾರಣೆ ವೇಳೆ ಪ್ರೋಸಿಕ್ಯೂ ಷನ್ ಪರವಾಗಿ ೯೭ ಮಂದಿಯ ಸಾಕ್ಷಿ ಹೇಳಿಕೆಗಳನ್ನು ನ್ಯಾಯಾಲಯ ದಾಖಲಿಸಿಕೊಂಡಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರಾದ ಮೂವರು ಆರೋಪಿಗಳು ಜಾಮೀನು ಲಭಿಸದೆ ಕಳೆದ ಆರು ವರ್ಷಗಳಿಂದ ಜೈಲಿನಲ್ಲೇ ಕಳೆಯುತ್ತಿದ್ದಾರೆ. ಜ್ಯುಡೀಶಿಯಲ್ ಕಸ್ಟಡಿಯಲ್ಲೇ ಅವರ ವಿಚಾರಣೆ ನಡೆಸಲಾಗಿತ್ತು.

ಅಂದು ಕಣ್ಣೂರು ಕ್ರೈಮ್ ಬ್ರಾಂಚ್ ಎಸ್‌ಪಿಯಾಗಿದ್ದ ಡಾ. ಎ. ಶ್ರೀನಿವಾಸ್‌ರ ನೇತೃತ್ವದ ವಿಶೇಷ ತನಿಖಾ ತಂಡ ಈ ಕೊಲೆ ಪ್ರಕರ ಣದ ತನಿಖೆ ನಡೆಸಿ ಆರೋಪಿಗಳನ್ನು ಕೊಲೆ ನಡೆದ ಮೂರು ದಿನ ದೊಳಗಾಗಿ ಬಂಧಿಸಿತ್ತು. ಆರೋ ಪಿಗಳು ಬಂಧನಕ್ಕೊಳಗಾಗಿ ೮೮ ದಿನಗಳೊಳಗಾಗಿ ಕೊಲೆ ಪ್ರಕರಣದ ತನಿಖೆಯನ್ನು ಪೊಲೀಸರು ಪೂರ್ತೀಕರಿಸಿ ಅದರ ಚಾರ್ಜ್ ಶೀಟನ್ನು  ನ್ಯಾಯಾಲಯಕ್ಕೆ ಸಲ್ಲಿಸಿದ್ದರು.   ಮತೀಯ ಗಲಭೆ ಸೃಷ್ಟಿಸುವ ಉದ್ದೇಶ ಆರೋಪಿಗಳು ಹೊಂದಿದ್ದರೆಂದು ನ್ಯಾಯಾಲಯಕ್ಕೆ ಸಲ್ಲಿಸಿದ ಚಾರ್ಜ್‌ಶೀಟ್‌ನಲ್ಲಿ ಪೊಲೀಸರು ತಿಳಿಸಿದ್ದರು. ಪ್ರೋಸಿ ಕ್ಯೂಷನ್ ಪರವಾಗಿ ಮೊದಲು ಸ್ಪೆಷಲ್ ಪಬ್ಲಿಕ್ ಪ್ರೋಸಿಕ್ಯೂಟರ್ ಕಲ್ಲಿಕೋಟೆಯ ಎಂ. ಅಶೋಕನ್ ವಾದಿಸಿದ್ದರು. ಆದರೆ ಅವರು ಇತ್ತೀಚೆಗೆ ನಿಧನ ಹೊಂದಿದ್ದರು. ಅದರಿಂದಾಗಿ ಅವರ ಸಹಾಯಕ ವಕೀಲರಾದ ಕಲ್ಲಿಕೋಟೆ ನಿವಾಸಿ ನ್ಯಾಯವಾದಿ ಟಿ. ಶಿಜಿತ್ ಬಳಿಕ ಪಬ್ಲಿಕ್ ಪ್ರೋಸಿಕ್ಯೂಟರ್ ಆಗಿ ನ್ಯಾಯಾಲಯದಲ್ಲಿ ವಾದಿಸಿ ದರು. ೨೦೧೯ರಲ್ಲೇ ಈ ಕೊಲೆ ಪ್ರಕರಣದ ವಿಚಾರಣೆ ಆರಂಭಗೊಂ ಡಿತ್ತು. ಬಳಿಕ ವಿವಿಧ ಕಾರಣಗಳಿಂ ದಾಗಿ ವಿಚಾರಣೆ ಪದೇ ಪದೇ ಮುಂದೂಡಲ್ಪಟ್ಟಿತ್ತು. ಕೊಲೆಗೆ ಬಳಸಲಾದ ಆಯುಧಗಳು ಸೇರಿ ೪೫ರಷ್ಟು ವಸ್ತು ಪುರಾವೆಗಳು ಸೇರಿದಂತೆ ಒಟ್ಟು ೨೧೫ ಪುರಾವೆಗಳನ್ನು ತನಿಖಾ ತಂಡ ವಿಚಾರಣೆ ವೇಳೆ ನ್ಯಾಯಾಲಯಕ್ಕೆ ಸಲ್ಲಿಸಿತ್ತು. ಇದರಲ್ಲಿ ವೈಜ್ಞಾನಿಕ ಹಾಗೂ ಇತರ ಹಲವು ಪುರಾವೆಗಳೂ ಒಳಗೊಂಡಿದ್ದುವು.

Leave a Reply

Your email address will not be published. Required fields are marked *

You cannot copy content of this page