ಮಧೂರು ಕ್ಷೇತ್ರದಲ್ಲಿ 108 ನಾಳೀಕೇರ ಮಹಾಗಣಪತಿ ಹೋಮ, ನವಾನ್ನ
ಮಧೂರು: ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ನವಾನ್ನ ಮಹೋತ್ಸವ ಜರಗಿತು. ಬ್ರಹ್ಮಶ್ರೀ ಶಿವಪ್ರಸಾದ್ ತಂತ್ರಿ ದೇರೇಬೈಲು ಪೌರೋಹಿತ್ಯ ವಹಿಸಿದರು. ಬ್ರಹ್ಮಕಲಶೋತ್ಸವದಂಗವಾಗಿ 108 ನಾಳೀಕೇರ ಗಣಪತಿ ಹೋಮ ಜರಗಿತು. ಈ ಸಂದರ್ಭದಲ್ಲಿ ಮಾಣಿಲ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ನವೀಕರಣ ಬ್ರಹ್ಮಕಲಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಜಯದೇವ ಖಂಡಿಗೆ, ಕ್ಷೇತ್ರದ ಅರ್ಚಕ ಶ್ರೀಕೃಷ್ಣ ಉಪಾಧ್ಯಾಯ, ಎಕ್ಸಿಕ್ಯೂಟಿವ್ ಆಫೀಸರ್ ರಾಜೇಶ್ ಟಿ, ಪವಿತ್ರ ಪಾಣಿ ರತನ್ ಕುಮಾರ್ ಕಾಮಡ, ಕೆ. ಗಿರೀಶ್, ಎಂ.ಎ. ನಾಯ್ಕ್, ಮುರಳಿ ಗಟ್ಟಿ, ಬ್ರಹ್ಮಕಲಶೋತ್ಸವ ಸಮಿತಿಯ ಪದಾಧಿಕಾರಿಗಳು, ಸ್ಥಳೀಯ ಭಕ್ತರು ಭಾಗವಹಿಸಿದರು.