ಮಧೂರು ಕ್ಷೇತ್ರ ಬ್ರಹ್ಮಕಲಶೋತ್ಸವಸಿದ್ಧತೆ, ಸಮಿತಿ ರೂಪೀಕರಣ
ಮಧೂರು: ಪ್ರಸಿದ್ಧ ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ಕ್ಷೇತ್ರದಲ್ಲಿ ಅಷ್ಟಬಂಧ ಬ್ರಹ್ಮಕಲ ಶೋತ್ಸವ ಹಾಗೂ ಮೂಡಪ್ಪ ಸೇವೆಯ ಯಶಸ್ವಿಗೆ ಸಿದ್ಧತೆ ಆರಂಭಗೊಂಡಿದೆ.
ಇದರಂತೆ ಕ್ಷೇತ್ರ ನವೀಕರಣ ಸಮಿತಿ ಹಾಗೂ ದೇವಸ್ವಂ ಸಮಿತಿಯ ಭಕ್ತರ ಸಭೆ ಜರಗಿದ್ದು, ಇದರಲ್ಲಿ 21 ಸಮಿತಿಗಳನ್ನು ರೂಪೀ ಕರಿಸಲು ತೀರ್ಮಾನಿಸಲಾಗಿದೆ.
ಮುಂದಿನ ಮಾರ್ಚ್ 27ರಿಂದ ಎಪ್ರಿಲ್ 7ರ ವರೆಗೆ ಬ್ರಹ್ಮಕಲಶೋ ತ್ಸವ, ಮೂಡಪ್ಪ ಸೇವೆ ನಡೆಯಲಿದೆ. ಎಪ್ರಿಲ್ ೫ರಂದು ಮೂಡಪ್ಪ ಸೇವೆ ನಡೆಯಲಿದೆ. ಈ ಬಗ್ಗೆ ನಡೆದ ಸಭಯನ್ನು ಶ್ರೀಧಾಮ ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಉದ್ಘಾಟಿಸಿ ಆಶೀರ್ವಚನ ನೀಡಿದರು. ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಡಾ. ಬಿ.ಎಸ್. ರಾವ್ ಅಧ್ಯಕ್ಷತೆ ವಹಿಸಿದ್ದರು. ಬ್ರಹ್ಮಕಲ ಶೋತ್ಸವ ಸಮಿತಿ ಗೌರವ ಅಧ್ಯಕ್ಷ ಸದಾಶಿವ ಶೆಟ್ಟಿ ಕುಳೂರು ಕನ್ಯಾನ, ಉಪಾಧ್ಯಕ್ಷ ಕೆ.ಕೆ. ಶೆಟ್ಟಿ ಮುಂಡಪ್ಪಳ್ಳ, ಬಿ.ಕೆ. ಮಧೂರು,ರತನ್ ಕುಮಾರ್ ಕಾಮಡ, ರಾಜೇಶ್, ಮಂಜುನಾಥ ಕಾಮತ್, ಜಯದೇವ ಖಂಡಿಗೆ, ಶ್ರೀಕೃಷ್ಣ ಉಪಾಧ್ಯಾಯ, ಗಿರೀಶ್ ಕೆ, ಉದಯ ಕೊಲ್ಲಂಬಾಡಿ ಸಹಿತ ಹಲವರು ಭಾಗವಹಿಸಿದರು.