ಮಧೂರು: ಶ್ರೀ ದೇವರಿಗೆ ಬ್ರಹ್ಮಕಲಶಾಭಿಷೇಕ, ಬ್ರಹ್ಮಕುಂಭಾಭಿಷೇಕ
ಮಧೂರು: ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ ಹಾಗೂ ಮೂಡಪ್ಪ ಸೇವೆಯ ಅಂಗವಾಗಿ ಇಂದು ಬೆಳಿಗ್ಗೆ ಬ್ರಹ್ಮಕಲಶಾಭಿಷೇಕ, ಬ್ರಹ್ಮ ಕುಂಭಾಭಿಷೇಕ, ಶ್ರೀ ಮಹಾಗಣಪತಿ ದೇವರಿಗೆ ಬ್ರಹ್ಮಕುಂಭಾಭಿಷೇಕ, ಅವಸ್ರುತ ಬಲಿ, ಮಹಾ ಮೂಡಪ್ಪಸೇವೆಯ ಪ್ರಾರ್ಥನೆ, ಧ್ವಜಾರೋಹಣ ಮೊದಲಾದ ಕಾರ್ಯಕ್ರಮ ನಡೆಯಿತು. ಬಳಿಕ 128 ಕಾಯಿ ಅಷ್ಟದ್ರವ್ಯ ಮಹಾಗಣಪತಿಯಾಗ ಆರಂಭಗೊAಡಿತು.
ಸಂಜೆ 6ಕ್ಕೆ ಉತ್ಸವಬಲಿ, ಶ್ರೀ ಮಹಾಗಣಪತಿ ಮಂತ್ರಾನುಷ್ಠಾನ ನಡೆಯಲಿದೆ. ಇಂದು ಬೆಳಿಗ್ಗೆ ಚಿನ್ಮಯ ಮಿಶನ್ ಪ್ರಾದೇಶಿಕ ಮುಖ್ಯಸ್ಥರಾದ ಶ್ರೀ ವಿವಿಕ್ತಾನಂದ ಸರಸ್ವತಿ ಸ್ವಾಮೀಜಿಯವರು ಕ್ಷೇತ್ರಕ್ಕೆ ಆಗಮಿಸಿದ್ದು, ಅವರಿಗೆ ಪೂರ್ಣಕುಂಭ ಸ್ವಾಗತ ನೀಡಲಾಯಿತು. ಬಳಿಕ ಧಾರ್ಮಿಕ ಸಭೆ ನಡೆಯಿತು.ಮಧ್ಯಾಹ್ನ 12.30ರಿಂದ ಹರಿಕಥಾ ಸತ್ಸಂಗ, 1.30ರಿಂದ ದಾಸಗಾನಮೃತ, 2.30ರಿಂದ ಭಕ್ತಿರಸಮಂಜರಿ ನಡೆಯಲಿದೆ. ಸಂಜೆ 4ಕ್ಕೆ ಮಾರ್ಗದರ್ಶಕ ಮಂಡಳಿ ರಾಜ್ಯ ಪ್ರಧಾನ ಕಾರ್ಯದರ್ಶಿ ಶ್ರೀಮದ್ ಸತ್ಸ್ವರೂಪಾನಂದ ಸರಸ್ವತಿ ಅವರಿಗೆ ಪೂರ್ಣಕುಂಭ ಸ್ವಾಗತ ನೀಡಲಾಗುವುದು. ರಾತ್ರಿ 7.30ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ವಾದ್ಯ ಸಂಗಮA, 9ರಿಂದ ಭರತನಾಟ್ಯ ನಡೆಯಲಿದೆ. ವೇದಿಕೆ 3ರಲ್ಲಿ ಸಂಜೆ 6.30ರಿಂದ ಪಾವಂಜೆ ಮೇಳದವರಿಂದ ಯಕ್ಷಗಾನ ಬಯಲಾಟ ಶ್ರೀದೇವಿ ಮಹಾತ್ಮೆ ಪ್ರದರ್ಶನಗೊಳ್ಳಲಿದೆ.