ಮನೆಗೆ ಅತಿಕ್ರಮಿಸಿ ನುಗ್ಗಿ ಪತ್ನಿಯ ತಂದೆಗೆ ಕಬ್ಬಿಣದ ಸರಳಿನಿಂದ ಹೊಡೆದು ಕೊಲೆಗೈಯ್ಯಲೆತ್ನ: ಆರೋಪಿ ಬಂಧನ

ಕುಂಬಳೆ: ಮದ್ಯದ ಅಮಲಿನಲ್ಲಿ ಮನೆಗೆ ಅತಿಕ್ರಮಿಸಿ  ನುಗ್ಗಿ ಪತ್ನಿಯ ತಂದೆಯನ್ನು  ಕಬ್ಬಿಣದ ಸರಳಿನಿಂದ ಹೊಡೆದು ಕೊಲ್ಲಲು  ಪ್ರಯತ್ನಿಸಿದ ಆರೋಪಿಯನ್ನು ಕುಂಬಳೆ ಪೊಲೀ ಸರು ಬಂಧಿಸಿದ್ದಾರೆ. ಕರ್ನಾಟಕದ ದೇರಳಕಟ್ಟೆ ನಿವಾಸಿ ಅನ್ವರ್ (32) ಎಂಬಾತನನ್ನು ಎಸ್‌ಐ ಶ್ರೀಜೇಶ್ ನೇತೃತ್ವದ ತಂಡ ಬಂಧಿಸಿದೆ. ಆರೋಪಿ ವಿರುದ್ಧ ಐಪಿಸಿ ೩೦೮ ಪ್ರಕಾರ ಕೇಸು ದಾಖಲಿಸಲಾಗಿದೆ. ದಂಡೆಗೋಳಿ ಕಿದೂರು ನಿವಾಸಿ ಮುಹಮ್ಮದ್ ಯೂಸಫ್ ಎಂಬವ ರನ್ನು ಹೊಡೆದು ಕೊಲೆಗೈಯ್ಯಲು ಆರೋಪಿ ಪ್ರಯತ್ನಿಸಿರುವುದಾಗಿ ದೂರಲಾಗಿದೆ.  ಶನಿವಾರ ಮುಂಜಾನೆ ೧ ಗಂಟೆ ವೇಳೆ ಯೂಸಫ್‌ರ ಮನೆಗೆ  ತಲುಪಿದ ಆರೋಪಿ  ಕಾಲಿಂಗ್ ಬೆಲ್ ಮಾಡಿ ಹಾಗೂ ಕಿಟಿಕಿಗೆ ಬಡಿದು ಮನೆಯವರನ್ನು ಎಬ್ಬಿಸಿದ್ದನು. ನಿರಂತರ ಕಾಲಿಂಗ್ ಬೆಲ್ ಮಾಡಿದ ಹಿನ್ನೆಲೆ ಯಲ್ಲಿ ಯೂಸಫ್ ಬಾಗಿಲು ತೆರೆದು ಹೊರಗೆ ಬಂದಿದ್ದಾರೆ. ಈ ವೇಳೆ ಅನ್ವರ್ ಕೈಯಿಂದ ಯೂಸಫ್‌ರ ಎದೆಗೆ ಹೊಡೆದಿದ್ದು, ಬಳಿಕ ಕಬ್ಬಿಣದ ಸರಳಿನಿಂದ ತಲೆಗೆ ಬಡಿಯಲು ಯತ್ನಿಸಿದ್ದಾನೆ. ಆದರೆ ಹೊಡೆತದಿಂದ ತಪ್ಪಿಸಿಕೊಂಡಿರುವುದರಿಂದ ಅಪಾಯದಿಂದ ಪಾರಾಗಿರುವುದಾಗಿ ಯೂಸಫ್ ಪೊಲೀ ಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಪುತ್ರಿ ತಫ್ಸೀರಳನ್ನು ಮದುವೆಯಾದ ಬಳಿಕ ಒಂದು ವರ್ಷ ಕಾಲ ಅನ್ವರ್ ಉತ್ತಮ ರೀತಿಯಲ್ಲಿ ದ್ದನು. ಬಳಿಕ ಮದ್ಯ ಸೇವಿಸಿ ಬಂದು ಮನೆಯಲ್ಲಿ  ಹಲ್ಲೆಗೈಯ್ಯಲು  ಪ್ರಯತ್ನಿಸ ತೊಡಗಿದ್ದಾನೆಂದು ಮನೆಯವರು ದೂರಿದ್ದಾರೆ. ಈತನ ಉಪಟಳ ತೀವ್ರವಾದ ಹಿನ್ನೆಲೆಯಲ್ಲಿ ಆರು ತಿಂಗಳ ಹಿಂದೆ ಯೂಸಫ್ ಮಗಳನ್ನು ಸ್ವಂತ ಮನೆಗೆ ಕರೆದುಕೊಂಡು ಬಂದಿದ್ದಾರೆನ್ನಲಾಗಿದೆ.  ಕಳೆದ ತಿಂಗಳು ಕೂಡಾ ಅನ್ವರ್ ಮನೆಗೆ ತಲುಪಿ ದಾಂಧಲೆ ನಡೆಸಿರುವುದಾಗಿ ದೂರಲಾಗಿದೆ. ನ್ಯಾಯಾಲಯದಲ್ಲಿ ಹಾಜರುಪಡಿಸಿದ ಅನ್ವರ್‌ಗೆ ರಿಮಾಂಡ್ ವಿಧಿಸಲಾಗಿದೆ.

RELATED NEWS

You cannot copy contents of this page