ಮನೆಗೆ ನುಗ್ಗಿ ಕಿಟಿಕಿ ಗಾಜು ಹಾನಿ: ನೆರೆಮನೆ ನಿವಾಸಿ ವಿರುದ್ಧ ಕೇಸು
ಬದಿಯಡ್ಕ: ಮನೆಗೆ ಅತಿಕ್ರಮಿಸಿ ನುಗ್ಗಿ ಕಿಟಿಕಿಯ ಗಾಜನ್ನು ಹಾನಿಗೊಳಿಸಿದ ಬಗ್ಗೆ ದೂರಲಾಗಿದೆ. ನೆರೆಮನೆ ನಿವಾಸಿಯಾದ ಯುವಕನ ವಿರುದ್ಧ ಬದಿಯಡ್ಕ ಪೊಲೀಸರು ಕೇಸು ದಾಖಲಿಸಿದ್ದಾರೆ. ಕುಂಬ್ಡಾಜೆ ಎರಡನೇ ಮೈಲ್ ತೊಟ್ಟಿ ಎಂಬಲ್ಲಿನ ಕೆ. ಅಭಿಲಾಷ್‌ರ ಮನೆಗೆ ಸೋಮವಾರ ರಾತ್ರಿ 11.30 ರ ವೇಳೆ ಆಕ್ರಮಣ ನಡೆದಿದೆ. ನೆರೆಮನೆ ನಿವಾಸಿ ಪ್ರಶಾಂತ್ ಅಲಿಯಾಸ್ ಕುಟ್ರು(29) ಮರದ ಸಲಾಕೆಯೊಂದಿಗೆ ಮನೆಗೆ ನುಗ್ಗಿ ಕಿಟಿಕಿ ಗಾಜನ್ನು ಹೊಡೆದು ಹಾನಿಗೊಳಿಸಿರುವುದಾಗಿ ದೂರಲಾಗಿದೆ. ಪತ್ನಿಗೆ ಉಪಟಳ ನೀಡಿದ ಬಗ್ಗೆ ಪ್ರಶಾಂತ್ ವಿರುದ್ಧ ಅಭಿಲಾಷ್ ಪೊಲೀಸರಿಗೆ ದೂರು ನೀಡಿದ್ದರು. ಇದರ ವಿರೋಧದಲ್ಲಿ ಆಕ್ರಮಣ ನಡೆಸಿರಬೇಕೆಂದು ಅಭಿಲಾಷ್ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಬದಿಯಡ್ಕ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ.