ಮನೆಗೆ ನುಗ್ಗಿ ಮಹಿಳೆ, ಪುತ್ರನಿಗೆ ಹಲ್ಲೆ: ಆರೋಪಿ ಬಂಧನ
ಕುಂಬಳೆ: ಮನೆಗೆ ಅತಿಕ್ರಮಿಸಿ ನುಗ್ಗಿ ಮಹಿಳೆ ಹಾಗೂ ಅವರ ವಿಕಲಚೇತನನಾದ ಪುತ್ರನಿಗೆ ಹಲ್ಲೆಗೈದ ಪ್ರಕರಣದಲ್ಲಿ ಆರೋಪಿ ಯನ್ನು ಕುಂಬಳೆ ಪೊಲೀಸರು ಬಂಧಿಸಿದ್ದಾರೆ. ಅಂಗಡಿಮೊಗರು ನಿವಾಸಿ ರಜಾಕ್ (31) ಎಂಬಾತ ಬಂಧಿತ ಆರೋಪಿ ಯಾಗಿದ್ದು, ಈತನಿಗೆ ನ್ಯಾಯಾಲಯ ರಿಮಾಂಡ್ ವಿಧಿಸಿದೆ. ಕುಡಾಲುಮೇ ರ್ಕಳ ಕಂಬಾರು ಕಾನಡ್ಕ ಎಂಬಲ್ಲಿನ ಕುಸುಮ (65) ಹಾಗೂ ಅವರ ಪುತ್ರ ದಿನೇಶ್‌ಗೆ ಹಲ್ಲೆಗೈದ ಆರೋಪದಂತೆ ರಜಾಕ್‌ನನ್ನು ಬಂಧಿಸಲಾಗಿದೆ. ಎಪ್ರಿಲ್ ೨ರಂದು ಆರೋಪಿ ರಜಾಕ್ ಮನೆಗೆ ನುಗ್ಗಿ ಕುಸುಮ ಹಾಗೂ ಪುತ್ರನಿಗೆ ಹಲ್ಲೆಗೈದಿದ್ದನು. ಈ ಸಂಬಂಧ ಕುಂಬಳೆ ಪೊಲೀಸರು ಈತನ ವಿರುದ್ಧ ಕೊಲೆಯತ್ನ ಕೇಸು ದಾಖಲಿಸಿ ಕೊಂಡಿದ್ದರು. ಈ ಪ್ರಕರ ಣವಲ್ಲದೆ ಆರೋಪಿ ವಿರುದ್ಧ ಈ ಹಿಂದೆ ನರಹತ್ಯಾಯತ್ನ ಹಾಗೂ ಹೊಡೆದಾಟ ಪ್ರಕರಣವೂ ದಾಖಲಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ.