ಮನೆಗೆ ಬೀಗ ಜಡಿದು ಸಂಬಂಧಿಕರ ಮನೆಗೆ ತೆರಳಿದ್ದಾಗ ಕಳವು: ಕೊಲ್ಲಿ ಉದ್ಯೋಗಿಯ 3 ಪವನ್ ಚಿನ್ನಾಭರಣ ನಾಪತ್ತೆ
ಕಾಸರಗೋಡು: ಮನೆಗೆ ಬೀಗ ಜಡಿದು ಕುಟುಂಬ ಸಂಬಂಧಿಕರ ಮನೆಗೆ ರಂಜಾನ್ ವ್ರತ ಉಪವಾಸ ಕೊನೆಗೊಳಿಸಲು ತೆರಳಿದಾಗ ಕಳವು ನಡೆಸಲಾಗಿದೆ. 3 ಪವನ್ ಚಿನ್ನಾಭರಣ ವನ್ನು ಕಳವುಗೈಯ್ಯಲಾಗಿದೆ. ಮೇಲ್ಪರಂಬ ಕೈನೋತ್ ನಿವಾಸಿ ಕೊಲ್ಲಿ ಉದ್ಯೋಗಿ ಕೆ. ಮುಜೀಬ್‌ರ ಮನೆಯಿಂದ ನಿನ್ನೆ ಕಳವು ನಡೆಸಲಾಗಿದೆ. ಸಂಜೆ ಮುಜೀ ಬ್ ಹಾಗೂ ಕುಟುಂಬ ಮನೆಗೆ ಬೀಗ ಹಾಕಿ ಪಳ್ಳಿಕ್ಕರೆಯಲ್ಲಿ ರುವ ಸಂಬಂಧಿಕರ ಮನೆಗೆ ತೆರಳಿದ್ದರು. ರಾತ್ರಿ 11 ಗಂಟೆಗೆ ಹಿಂತಿರುಗಿದಾಗ ಕಪಾಟಿನಲ್ಲಿರಿಸಿದ್ದ ಮೂರು ಪವನ್ ತೂಕದ ಚಿನ್ನಾಭರಣಗಳು ನಾಪತ್ತೆಯಾಗಿದೆ. ಸ್ಥಳಕ್ಕೆ ಮೇಲ್ಪರಂಬ ಎಸ್‌ಐ ಅನೀಶ್‌ರ ನೇತೃತ್ವದಲ್ಲಿ ಪೊಲೀಸರು ತಲುಪಿ ತನಿಖೆ ನಡೆಸಿದರು. ಪೊಲೀಸ್ ಶ್ವಾನ, ಬೆರಳಚ್ಚು ತಜ್ಞರು ಕಳವು ನಡೆದ ಮನೆಗೆ ತಲುಪಿ ತಪಾಸಣೆ ನಡೆಸಿದ್ದಾರೆ. ಕಳ್ಳರದ್ದೆಂದು ಶಂಕಿಸುವ ಕೆಲವು ಬೆರಳಚ್ಚುಗಳು ಲಭ್ಯವಾಗಿವೆ.