ಮನೆಮಂದಿ ಉರೂಸ್‌ಗೆ ತೆರಳಿದ್ದ ವೇಳೆ ಕಳವು: ತನಿಖೆ ತೀವ್ರ
ಮಂಜೇಶ್ವರ: ಮನೆಯಲ್ಲಿ ಯಾರೂ ಇಲ್ಲದ ವೇಳೆ ನುಗ್ಗಿದ ಕಳ್ಳರು 8,000 ರೂ. ದೋಚಿದ ಘಟನೆಯಲ್ಲಿ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ಕಡಂಬಾರು ಚಾದಿಪಡ್ಪು ನಿವಾಸಿ ಇಬ್ರಾಹಿಂರ ಮನೆಯಿಂದ ಕಳೆದ ಗುರುವಾರ ಕಳವು ನಡೆದಿತ್ತು. ಕಡಂಬಾರು ಮಸೀದಿಯಲ್ಲಿ ನಡೆದ ಉರೂಸ್ ಕಾರ್ಯಕ್ರಮಕ್ಕೆ ಇಬ್ರಾಹಿಂರ ಕುಟುಂಬ ತೆರಳಿದ್ದರು. ರಾತ್ರಿ ಮನೆಗೆ ಮರಳಿದಾಗ ಕಳವು ನಡೆದಿರುವುದು ಗಮನಕ್ಕೆ ಬಂದಿದ್ದು, ಅವರು ನೀಡಿದ ದೂರಿನಂತೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಬೆರಳಚ್ಚು ತಜ್ಞರು, ಶ್ವಾನದಳ ತಲುಪಿ ತನಿಖೆ ನಡೆಸಲಾಗಿದೆ.