ಮನೆಯಲ್ಲಿ ಬಚ್ಚಿಡಲಾಗಿದ್ದ 2.034 ಕೆಜಿ ಗಾಂಜಾ ವಶ: ಓರ್ವ ಸೆರೆ
ಕುಂಬಳೆ: ಕುಂಬಳೆ ಸಮೀಪದ ಕೊಯಿಪ್ಪಾಡಿ ಬಲ್ಲಂಪಾಡಿಯಲ್ಲಿ ಕಾಸರಗೋಡು ಎಕ್ಸೈಸ್ ಸ್ಪೆಷಲ್ ಸ್ಕ್ವಾಡ್‌ನ ಸರ್ಕಲ್ ಇನ್‌ಸ್ಪೆಕ್ಟರ್ ಪ್ರಶೋಬ್ ಕೆ.ಎಸ್‌ರ ನೇತೃತ್ವದ ತಂಡ ನಿನ್ನೆ ನಡೆಸಿದ ಕಾರ್ಯಾ ಚರಣೆಯಲ್ಲಿ ಮನೆಯೊಂದರಲ್ಲಿ ಬಚ್ಚಿಡಲಾಗಿದ್ದ 2.034 ಕಿಲೋ ಗಾಂಜಾ ಪತ್ತೆಹಚ್ಚಿ ವಶಪಡಿಸಿದೆ. ಇದಕ್ಕೆ ಸಂಬಂಧಿಸಿ ಬಲ್ಲಂಪಾಡಿಯ ಅಬ್ದುಲ್ಲ ಬಿ (50) ಎಂಬಾತನನ್ನು ಬಂಧಿಸಿ ಆತನ ವಿರುದ್ಧ ಎನ್‌ಡಿಪಿಎಸ್ ಕಾನೂನು ಪ್ರಕಾರ ಪ್ರಕರಣ ದಾಖಲಿಸಲಾಗಿದೆ. ಕುಂಬಳೆ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ವಿನೋದ್ ಕುಮಾರ್ ಸಾನಿಧ್ಯದಲ್ಲಿ ಬಂಧಿತನ ದೇಹ ತಪಾಸಣೆ ನಡೆಸಲಾಯಿತು.
ಅಸಿಸ್ಟೆಂಟ್ ಎಕ್ಸೈಸ್ ಇನ್‌ಸ್ಪೆಕ್ಟರ್‌ಗಳಾದ ಮುರಳಿ ಕೆ.ವಿ, ಸಿಕೆವಿ ಸುರೇಶ್, ಪ್ರಿವೆಂಟೀವ್ ಆಫೀಸರ್‌ಗಳಾದ ನೌಶಾದ್ ಕೆ, ಪ್ರಶಾಂತ್ ಕುಮಾರ್, ಸಿವಿಲ್ ಎಕ್ಸೈಸ್ ಆಫೀಸರ್‌ಗಳಾದ ವಿ. ಸೋನು ಸೆಬಾಸ್ಟಿಯನ್, ಸತೀಶನ್, ಅಶ್ವತಿ, ಚಾಲಕ ಸಜೀಶ್, ಕೆಮು ತಂಡದ ಪ್ರಿವೆಂಟೀವ್ ಆಫೀಸರ್ ಸತೀಶನ್ ನಾಲುಪುರಕ್ಕಲ್ ಪ್ರಿವೆಂಟೀವ್ ಆಫೀಸರ್ ಗ್ರೇಡ್ ಸತೀಶ್ ವೈಕತ್ತ್ ಮತ್ತು ಚಾಲಕ ಮಹೇಶ್ ಎಂಬಿವರು ಈ ಅಬಕಾರಿ ಕಾರ್ಯಾಚರಣೆ ನಡೆಸಿದ ತಂಡದಲ್ಲಿ ಒಳಗೊಂಡಿದ್ದರು.