ಮನೆಯಲ್ಲಿ ಬೆಂಕಿ ಅನಾಹುತ : ಲಕ್ಷಾಂತರ ರೂ.ಗಳ ನಷ್ಟ
ಕಾಸರಗೋಡು: ಮನೆಗೆ ಬೆಂಕಿ ತಗಲಿ ಲಕ್ಷಾಂತರ ರೂ.ಗಳ ನಾಶನಷ್ಟ ಉಂಟಾದ ಘಟನೆ ನೆಲ್ಲಿಕಟ್ಟೆಗೆ ಸಮೀಪದ ಚಂದ್ರಂಪಾರದಲ್ಲಿ ನಿನ್ನೆ ರಾತ್ರಿ 11.45ರ ವೇಳೆ ಸಂಭವಿಸಿದೆ.
ಚಂದ್ರಂಪಾರದ ಶಾಫಿ ಎಂಬವರ ಮನೆಯಲ್ಲಿ ಈ ಬೆಂಕಿ ಅನಾಹುತ ಸಂಭವಿಸಿದೆ. ಮನೆಯ ಅಡುಗೆ ಕೊಠಡಿಯೊಳಗಿದ್ದ ಫ್ರಿಡ್ಜ್, ಗ್ರೈಂಡರ್, ವಾಶಿಂಗ್ ಮೆಶಿನ್, ಸ್ಟೌವ್ ಸೇರಿದಂತೆ ಮನೆ ಸಾಮಗ್ರಿಗಳೆಲ್ಲವೂ ಬೆಂಕಿಗಾಹುತಿಯಾಗಿದೆ.
ಈ ಬಗ್ಗೆ ಮಾಹಿತಿ ಲಭಿಸಿದ ಅಸಿಸ್ಟೆಂಟ್ ಸ್ಟೇಷನ್ ಆಫೀಸರ್ ಎಂ.ಕೆ. ರಾಜೇಶ್‌ರ ನೇತೃತ್ವದ ಕಾಸರಗೋಡು ಅಗ್ನಿಶಾಮಕ ದಳ ತಕ್ಷಣ ಘಟನೆ ನಡೆದ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವ ಮೂಲಕ ಹೆಚ್ಚಿನ ಅನಾಹುತ ತಪ್ಪಿಸಿದೆ.ಈ ಕಾರ್ಯಾಚರಣೆ ನಡೆಸಿದ ಅಗ್ನಿಶಾಮಕದಳದಲ್ಲಿ ಸೀನಿಯರ್ ಫಯರ್ ಆಂಡ್ ರೆಸ್ಕ್ಯೂ ಆಫೀಸರ್ ವಿ.ಎಂ. ಸತೀಶನ್, ಇತರ ಸಿಬ್ಬಂದಿಗಳಾದ ಜೀವನ್, ಅರುಣ್, ಜಿತ್ತು, ಅಬಯಾಸನ್, ಸಿರಾಜ್, ಸಾಬಿನ್, ಹೋಮ್ ಗಾರ್ಡ್ ಪ್ರವೀಣ್ ಉಣ್ಣಿಕೃಷ್ಣನ್ ಎಂಬವರು ಒಳಗೊಂಡಿದ್ದರು. ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ತಗಲಿಕೊಂಡಿರಬಹುದೆಂದು ಶಂಕಿಸಲಾಗುತ್ತಿದೆ.