ಮನೆಯಲ್ಲೇ ಜನನ, ಮರಣ ನೋಂದಾವಣೆ ನಡೆಸಲು ಕೇಂದ್ರದಿಂದ ಮೊಬೈಲ್ ಆಪ್ ಬಿಡುಗಡೆ
ನವದೆಹಲಿ: ಜನನ ಮತ್ತು ಮರಣ ನೋಂದಣಿಗಳನ್ನು ಮನೆ ಯಲ್ಲೇ ನಡೆಸಲು ಅನುಕೂಲಕರ ವಾಗುವಂತೆ ಸಿವಿಲ್ ರಿಜಿಸ್ಟ್ರೇಶನ್ ಸಿಸ್ಟಂ (ಸಿಆರ್‌ಎಸ್) ಮೊಬೈಲ್ ಆಪ್‌ನ್ನು ಕೇಂದ್ರ ಗೃಹ ಸಚಿವ ಅಮಿತ್‌ಶಾ ಬಿಡುಗಡೆ ಗೊಳಿಸಿದ್ದಾರೆ.
ಜನನ-ಮರಣವನ್ನು ಎಲ್ಲಿಂದ ಬೇಕಾದರೂ ಯಾವುದೇ ಸಮಯ ದಲ್ಲೂ ಇನ್ನು ಸಿಆರ್‌ಎಸ್ ಆಪ್ ಮೂಲಕ ನೋಂದಾಯಿಸಬಹುದಾಗಿ ದೆ. ನೋಂದಣೆ ಬಯಸುವವರು ಗೂಗಲ್ ಪೇ ಸ್ಟೋರ್‌ಗೆ ಹೋಗಿ ಅದರಿಂದ ಸಿಆರ್‌ಎಸ್ ಆಪ್ ಡೌನ್‌ಲೋಡ್ ಮಾಡಬೇಕು. ನಂತರ ಯೂಸರ್ ಐಡಿ ಪಾಸ್ವರ್ಡ್ ನೈಜತೆ ಪರಿಶೀಲನೆಗಾಗಿ ಮೊಬೈಲ್ ಫೋನ್‌ಗೆ ಎಸ್‌ಎಂಎಸ್ ಮೂಲಕ ಒಟಿಪಿ ನಂಬ್ರ ಬರ ಲಿದ್ದು, ಅದನ್ನು ದೃಢೀಕರಿಸಬೇಕು.
ಮುಖಪುಟ ಪರದೆಯಲ್ಲಿ ಪ್ರೊಫೈಲ್, ಜನನ, ಸಾವು, ಶುಲ್ಕ ಆಯ್ಕೆಗಳು ಕಾಣಿಸುತ್ತದೆ. ಜನ್ಮ ದಿನಾಂಕವನ್ನು ನೋಂದಾಯಿಸಲು ಜನನ ಮತ್ತು ನಂತರ ಜನನ ನೋಂದಾವಣೆ ಆಯ್ಕೆ ಮಾಡಿ ಮಗುವಿನ ಜನ್ಮ ದಿನಾಂಕ, ವಿಳಾಸ, ಕುಟುಂಬದ ಮಾಹಿತಿ ನಮೂದಿಸಿ ಅಗತ್ಯದ ದಾಖಲೆ ಲಗತ್ತಿಸಬೇಕು. ಇನ್ನು ಮರಣ ನೋಂದಾಯಿಸಲು ಇದೇ ರೀತಿ ಪ್ರಕ್ರಿಯೆ ಮಾಡಿ ಮರಣ ದಿನಾಂಕ, ವಿಳಾಸ ಮತ್ತು ಇತರ ಮಾಹಿತಿಗಳನ್ನು ದಾಖಲಿಸಿ ಆನ್‌ಲೈನ್‌ನಲ್ಲಿ ಶುಲ್ಕ ಪಾವತಿಸಿದರೆ ಜನನ ಅಥವಾ ಮರಣ ಡಿಜಿಟಲ್ ಪ್ರಮಾಣಪತ್ರ ಬರಲಿದ್ದು, ಅದನ್ನು ಡೌನ್‌ಲೋಡ್ ಮಾಡಿ ಇಟ್ಟುಕೊಳ್ಳಬೇಕು.