ಮನೆಯಿಂದ ನಗ-ನಗದು ಕಳವು: ಇಬ್ಬರ ಸೆರೆ

ಕಾಸರಗೋಡು: ಮನೆ ಬಾಗಿಲನ್ನು ಒಡೆದು ಒಳನುಗ್ಗಿ ೧೦ ಪವನ್ ಚಿನ್ನದ ಒಡವೆ ಮತ್ತು 1,60,000  ರೂ. ನಗದು ಕಳವುಗೈದ ಪ್ರಕರಣದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಹೊಸದುರ್ಗ ನಿವಾಸಿ ಮನು (36) ಮತ್ತು ಕಣ್ಣೂರು ಪುದಿಯ ಪೆರು ನಿವಾಸಿ ಸಂತೋಷ್ (43) ಬಂಧಿತ ಆರೋಪಿಗಳು. ಕಳೆದ ಸೋಮವಾರ ಕಣ್ಣೂರು ಇರಿಟ್ಟಿ ಅಯಿಚ್ಚದ ಕೆ.ಎಂ. ವೇಣುಗೋಪಾಲ್‌ರ ಬೀಗ ಜಡಿದ ಮನೆಗೆ ಒಳನುಗ್ಗಿದ ಕಳ್ಳರು ನಗ-ನಗದು ಕಳವು ಗೈದಿದ್ದರು. ಈ ಬಗ್ಗೆ ಇರಿಟ್ಟಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಅದಕ್ಕೆ ಸಂಬಂಧಿಸಿ ಈ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

RELATED NEWS
ಬದಿಯಡ್ಕದಲ್ಲಿ ಹಸಿರು ಕ್ರಿಯಾಸೇನೆಯಲ್ಲೂ ವಂಚನೆ: 4,000 ರೂ. ಯೂಸರ್ ಫೀಸ್ ಬ್ಯಾಂಕ್‌ನಲ್ಲಿ ಪಾವತಿಸಿ ಪಂ. ಕಚೇರಿಯಲ್ಲಿ ನೀಡಿದ ರಶೀದಿಯಲ್ಲಿ 40,000 ವಾಗಿ ತಿದ್ದುಪಡಿ; ಮಹಿಳಾ ಅಸೋಸಿಯೇಶನ್ ವಿಲ್ಲೇಜ್ ಅಧ್ಯಕ್ಷೆ ಸಹಿತ ಇಬ್ಬರನ್ನು ಕೆಲಸದಿಂದ ತೆರವು

You cannot copy contents of this page