ಮನೆಯಿಂದ 15,000 ರೂ. ಕಳವು: ಮಗನ ಸ್ನೇಹಿತನ ವಿರುದ್ಧ ಕೇಸು
ಕಾಸರಗೋಡು: ಮನೆಗೆ ಬಂದ ಮಗನ ಸ್ನೇಹಿತ ಆ ಮನೆಯಿಂದ 15,೦೦೦ ರೂ. ನಗದು ಕಳವುಗೈದ ಬಗ್ಗೆ ವಿದ್ಯಾನಗರ ಪೊಲೀಸರಿಗೆ ದೂರು ನೀಡಲಾಗಿದೆ.
ನಾಯಮ್ಮಾರಮೂಲೆ ಕ್ವಾರ್ಟರ್ಸ್‌ನಲ್ಲಿ ವಾಸಿಸುತ್ತಿರುವ ಅರ್ಫಾನಾ ಎಂಬವರು ಈ ಬಗ್ಗೆ ದೂರು ನೀಡಿದ್ದು, ಅದರಂತೆ ಅವರ ಮಗನ ಸ್ನೇಹಿತ ನೆಲ್ಲಿಕಟ್ಟೆಯ ಸುಹೈಲ್ ಎಂಬಾತನ ವಿರುದ್ದ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಕಳೆದ ಜೂನ್ ೭ರಂದು ಕಳವು ನಡೆದಿದೆ. ಕುಟುಂಬಶ್ರೀಯ ಸಾಲ ಪಾವತಿಸ ಲೆಂದು ತಾನು ಪುಸ್ತಕವೊಂದರ ಒಳಭಾಗದಲ್ಲಿ ಹಣ ಇರಿಸಿ ಪುಸ್ತಕವನ್ನು ಕಪಾಟಿನ ಮೇಲೆ ಇರಿಸಿದ್ದೆ. ಅದನ್ನು ಕಳವುಗೈಯ್ಯಲಾ ಗಿದೆಯೆಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಅರ್ಫಾನಾ ತಿಳಿಸಿದ್ದಾರೆ.