ಮನೆಯೊಡತಿ ನೆರೆಮನೆಯಾಕೆಯೊಂದಿಗೆ ಮಾತನಾಡುತ್ತಿದ್ದಾಗ ಮನೆಗೆ ನುಗ್ಗಿದ ಕಳ್ಳ ಚಿನ್ನಾಭರಣ ಕಳವುಗೈದು ಪರಾರಿ
ಹೊಸದುರ್ಗ: ಮನೆಯೊಡತಿ ನೆರೆಮನೆಯ ಗೃಹಿಣಿಯೊಂದಿಗೆ ಮಾತನಾಡುತ್ತಿದ್ದ ಸಂದರ್ಭದಲ್ಲಿ ಮನೆಗೆ ನುಗ್ಗಿದ ಕಳ್ಳ ಐದು ಪವನ್ ಚಿನ್ನಾಭರಣ ಕಳವುಗೈದು ಪರಾರಿಯಾದ ಘಟನೆ ನಡೆದಿದೆ. ನೀಲೇ
ರ ಪಳ್ಳಿಕೆರೆ ಸೈಂಟ್ ಆನ್ಸ್ ಯುಪಿ ಶಾಲೆ ಸಮೀಪದ ವ್ಯಾಪಾರಿಯಾಗಿರುವ ಮೇಲತ್ತ್ ಸುಕುಮಾರನ್ ಎಂಬವರ ಮನೆಯಲ್ಲಿ ಕಳವು ನಡೆದಿದೆ.
ಸುಕುಮಾರನ್‌ರ ಪತ್ನಿ ಅಂಗಡಿಗೆ ತೆರಳಿ ಪತಿಗೆ ಆಹಾರ ನೀಡಿ ಬಂದ ಬಳಿಕ ನೆರೆಮನೆಯ ಗೃಹಿಣಿಯೊಂದಿಗೆ ಮಾತನಾಡುತ್ತಿದ್ದಾಗ ಕಳ್ಳ ಮನೆಗೆ ನುಗ್ಗಿದ್ದಾನೆ. ಕಳವಿನ ಬಳಿಕ ಅಡುಗೆ ರೋಣೆ ಭಾಗದ ಮೂಲಕ ತೆರಳಿ ಆವರಣ ಕೋಡೆ ಹಾರಿ ಪರಾರಿಯಾಗಿದ್ದಾನೆ. ಸುಕುಮಾರನ್‌ರ ಪತ್ನಿ ಮನೆಯೊಳಗೆ ತೆರಳಿ ನೋಡಿದಾಗ ಕಪಾಟುಗಳಲ್ಲಿದ್ದ ವಸ್ತುಗಳು ಚೆಲ್ಲಾಪಿಲ್ಲಿಯಾಗಿರುವುದು ಕಂಡು ಬಂದಿದೆ. ಬಳಿಕ ನಡೆಸಿದ ಶೋಧ ವೇಳೆ ಚಿನ್ನಾಭರಣ ಕಳವಿಗೀಡಾಗಿರುವುದು ಅರಿವಿಗೆ ಬಂದಿದೆ. ವಿಷಯ ತಿಳಿದು ನೀಲೇಶ್ವರ ಪೊಲೀಸರು ಸ್ಥಳಕ್ಕೆ ತಲುಪಿ ಪರಿಶೀಲನೆ ನಡೆಸಿದರು.