ಮನೆಯೊಡೆಯ ಹಟ್ಟಿಯಲ್ಲಿ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ಉಪ್ಪಳ: ಪತ್ನಿ ಹಾಗೂ ಮಕ್ಕಳು ಹೊರಗೆ ಹೋಗಿದ್ದ ಸಂದರ್ಭದಲ್ಲಿ ಮನೆಯೊಡೆಯ ಹಟ್ಟಿಯಲ್ಲಿ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಕೋಳ್ಯೂರು ಕೊಡಂಗೆ ನಿವಾಸಿ ಸಂಜೀವ ಮೂಲ್ಯ (64) ಮೃತಪಟ್ಟ ವ್ಯಕ್ತಿ. ಇವರ ಪತ್ನಿ ಹಾಗೂ ಮಕ್ಕಳು ನಿನ್ನೆ ಹೊರಗೆ ತೆರಳಿದ್ದರು. ಸಂಜೆ ೫ ಗಂಟೆಗೆ ಅವರು ಮರಳಿ ಬಂದಾಗ ಸಂಜೀವ ಮೂಲ್ಯ ಮನೆಯಲ್ಲಿರಲಿಲ್ಲ.  ಇದರಿಂದ ಹುಡುಕುತ್ತಿದ್ದಾಗ ಹಟ್ಟಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಕೂಡಲೇ ಅವರನ್ನು ಮಂಗಲ್ಪಾಡಿ ತಾಲೂಕು ಆಸ್ಪತ್ರೆಗೆ ತಲುಪಿಸಿದ್ದು ಅಷ್ಟರೊಳಗೆ ಸಾವು ಸಂಭವಿಸಿತ್ತೆನ್ನಲಾಗಿದೆ.

ಸಂಜೀವ ಮೂಲ್ಯ ಬಡಗಿ ವೃತ್ತಿ ನಡೆಸುತ್ತಿದ್ದರು. ನೇಣು ಬಿಗಿಯಲು ಕಾರಣವೇನೆಂದು ತಿಳಿದು ಬಂದಿಲ್ಲವೆಂದು ಸಂಬಂಧಿಕರು ತಿಳಿಸುತ್ತಿದ್ದಾರೆ. ಮೃತತೇಹದ ಮರಣೋತ್ತರ ಪರೀಕ್ಷೆ ಇಂದು ಮಂಗಲ್ಪಾಡಿ ಆಸ್ಪತ್ರೆಯಲ್ಲಿ ನಡೆಸಲಾಯಿತು. ಘಟನೆ ಬಗ್ಗೆ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿಕೊಡಿದ್ದಾರೆ.ಮೃತರು ಪತ್ನಿ ಸುನಂದ, ಮಕ್ಕಳಾದ ಪ್ರಕಾಶ್, ಪ್ರಶಾಂತ, ರೇಶ್ಮ, ಸೊಸೆಯಂದಿರಾದ ಆಶಾ, ಸೌಮಿನಿ, ಅಳಿಯ ಚಂದ್ರಹಾಸ, ಇಬ್ಬರು ಸಹೋದರಿಯರ ಸಹಿತ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

RELATED NEWS

You cannot copy contents of this page