ಮನೆಯೊಳಗೆ ನಾಗರಹಾವು ಪ್ರತ್ಯಕ್ಷ
ಮುಳ್ಳೇರಿಯ: ಮನೆಯ ಅಡುಗೆ ಕೊಠಡಿಯೊಳಗೆ ಹಾವು ಪತ್ತೆಯಾ ಗಿದ್ದು ಇದರಿಂದ ಮನೆಯವರು ಭಯಭೀತರಾದ ಘಟನೆ ನಡೆದಿದೆ. ಕಾರಡ್ಕ ಅಡ್ಕ ನಿವಾಸಿ ನಿವೃತ್ತ ಅಧ್ಯಾಪಕ ಎ.ಕೆ. ಸದಾನಂದ ಎಂಬ ವರ ಮನೆಯ ಅಡುಗೆ ಕೊಠಡಿಯಲ್ಲಿ ನಿನ್ನೆ ಬೆಳಿಗ್ಗೆ ಹಾವು ಪತ್ತೆಯಾಗಿದೆ. ಅಡುಗೆ ಕೊಠಡಿಯೊಳಗೆ ಶಬ್ದ ಉಂಟಾಗಿದ್ದು, ಮನೆಯವರು ನೋಡಿ ದಾಗ ನಾಗರಹಾವು ಕಂಡುಬಂದಿದೆ. ಈ ಬಗ್ಗೆ ಮಾಹಿತಿ ಲಭಿಸಿದ ಅರಣ್ಯಪಾಲಕರು ಆಗಮಿಸಿದ್ದು, ಸರ್ಪ ವಲಂಟಿಯರ್ ಸನಿಲ್ ಬಾಳಕಡಂ ಹಾವನ್ನು ಸೆರೆಹಿಡಿಯುವಲ್ಲಿ ಸಫಲರಾದರು.
ಮಳೆಗಾಲದಲ್ಲಿ ಹಾವುಗಳ ಹಾವಳಿ ಹೆಚ್ಚಾಗುತ್ತಿದ್ದು, ಅದರಿಂದ ಜನರು ಜಾಗ್ರತೆ ಪಾಲಿಸಬೇಕೆಂದು ಅರಣ್ಯ ಪಾಲಕರು ಮುನ್ನೆಚ್ಚರಿಕೆ ನೀಡಿದ್ದಾರೆ.