ಮನೆಯೊಳಗೆ ನುಗ್ಗಿದ ವ್ಯಕ್ತಿ ಯುವತಿಯ ಕುತ್ತಿಗೆಯಿಂದ ಮಾಲೆ ಅಪಹರಿಸಲೆತ್ನ
ಕಾಸರಗೋಡು: ಮನೆಯೊಳಗೆ ಆಹಾರ ತಯಾರಿಸುತ್ತಿದ್ದ ಯುವತಿಯ ಕುತ್ತಿಗೆಯಿಂದ ಚಿನ್ನದ ಸರ ಕಸಿದೆಳೆಯಲು ವ್ಯಕ್ತಿಯೋರ್ವ ಯತ್ನ ವಿಫಲಗೊಂಡಿದೆ. ವೆಳ್ಳರಿಕುಂಡ್ ಪೊಲೀಸ್ ಠಾಣೆ ವ್ಯಾಪ್ತಿಯ ಪರಪ್ಪ ಕ್ಲಾಯಿಕೋಡ್ ಮುಂಡಿಯಾನ ಎಂಬಲ್ಲಿ ಘಟನೆ ನಡೆದಿದೆ. ಪರಪ್ಪದಲ್ಲಿ ಕೋಳಿ ಅಂಗಡಿ ನಡೆಸುತ್ತಿರುವ ಅಬ್ದುಲ್ಲ ಎಂಬವರ ಮಗಳ ಕುತ್ತಿಗೆಯಿಂದ ಸರ ಅಪಹರಿಸಲು ಯತ್ನ ನಡೆದಿದೆ. ನಿನ್ನೆ ರಾತ್ರಿ ೯ ಗಂಟೆ ವೇಳೆ ಯುವತಿ ಅಡುಗೆ ಕೋಣೆಯಲ್ಲಿ ಆಹಾರ ತಯಾರಿಸುತ್ತಿದ್ದ ವೇಳೆ ಅಲ್ಲಿಗೆ ಅತಿಕ್ರಮಿಸಿ ನುಗ್ಗಿದ ವ್ಯಕ್ತಿ ಸರ ಅಪಹರಿಸಲು ಯತ್ನಿಸಿದ್ದನು. ಈ ವೇಳೆ ಯುವತಿ ಬೊಬ್ಬೆ ಹಾಕಿದಾಗ ಪತಿ ಹಾಗೂ ಮಕ್ಕಳು ಅಲ್ಲಿಗೆ ತಲುಪಿದ್ದು ಅಷ್ಟರಲ್ಲಿ ದುಷ್ಕರ್ಮಿ ಸರವನ್ನು ಅಲ್ಲೇ ಉಪೇಕ್ಷಿಸಿ ಪರಾರಿಯಾಗಿದ್ದಾನೆ. ವಿಷಯ ತಿಳಿದು ವೆಳ್ಳರಿಕುಂಡ್ ಪೊಲೀಸ್ ಇನ್‌ಸ್ಪೆಕ್ಟರ್ ಕೆ.ಪಿ. ಸತೀಶ್‌ರ ನೇತೃತ್ವದಲ್ಲಿ ಪೊಲೀಸರು ಮನೆಗೆ ತಲುಪಿ ಶೋಧ ನಡೆಸಿದಾಗ ದುಷ್ಕರ್ಮಿ ಅಪಹರಿಸಿದ ಮಾಲೆ ಮನೆಯೊಳಗೆ ಪತ್ತೆಯಾಗಿದೆ. ಆರೋಪಿಗಾಗಿ ಶೋಧ ನಡೆಸಲಾಗುತ್ತಿದೆಯೆಂದು ಪೊಲೀಸರು ತಿಳಿಸಿದ್ದಾರೆ.