ಮನೆಯ ಬೆಡ್‌ರೂಮ್‌ನಲ್ಲಿ ಬಚ್ಚಿಡಲಾಗಿದ್ದ 33 ಕಿಲೋ ಗಾಂಜಾ ಪತ್ತೆ: ಓರ್ವ ಸೆರೆ

ಮಂಜೇಶ್ವರ: ಮಂಜೇಶ್ವರ ಪೊಲೀಸರು ನಡೆಸಿದ ಭಾರೀ ಕಾರ್ಯಾಚರಣೆಯಲ್ಲಿ 33.05 ಕಿಲೋ ಗಾಂಜಾ ಪತ್ತೆ ಹಚ್ಚಿದ್ದಾರೆ.

ಇದಕ್ಕೆ ಸಂಬಂಧಿಸಿ ಉಪ್ಪಳ ಸೋಂಕಾಲು ಕೊಡಂಗೆ ರಸ್ತೆಯ ಕೌಶಿಕ್ ನಿಲಯದ ಅಶೋಕ ಕೆ (25) ಎಂಬಾತನನ್ನು ಬಂಧಿಸಿ ಕೇಸು ದಾಖಲಿಸಲಾಗಿದೆ. ಗುಪ್ತ ಮಾಹಿತಿ ಲಭಿಸಿದನ್ವಯ ಪೊಲೀಸರು ಆರೋಪಿಯ ಮನೆಗೆ ಧಾಳಿ ನಡೆಸಿದ ಪರಿಶೀಲನೆಯಲ್ಲಿ  ಆ ಮನೆಯ ಬೆಡ್‌ರೂಂನೊಳಗೆ ಪ್ಲಾಸ್ಟಿಕ್ ಗೋಣಿ ಚೀಲದಲ್ಲಿ  ತುಂಬಿಸಿಡಲಾಗಿದ್ದ ಸ್ಥಿತಿಯಲ್ಲಿ ಗಾಂಜಾ ಪತ್ತೆಯಾಗಿದೆ. ಬಂಧಿತನು ಗಾಂಜಾ ವಿತgಣಾ ಜಾಲದ ಪ್ರಧಾನ ಕೊಂಡಿಯಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಜಿಲ್ಲಾ ವರಿಷ್ಠ ಪೊಲೀಸ್ ಅಧಿಕಾರಿ ಬಿ.ವಿ. ವಿಜಯ್ ಭರತ್ ರೆಡ್ಡಿ ನಿರ್ದೇಶ ಪ್ರಕಾರ ಡಿವೈಎಸ್ಪಿ ಸುನಿಲ್ ಕುಮಾರ್ ಮೇಲ್ನೋಟದಲ್ಲಿ ಮಂಜೇಶ್ವರ ಪೊಲೀಸ್ ಠಾಣೆಯ ಎಸ್‌ಐ ಉಮೇಶ್ ಕೆ.ಆರ್, ಪ್ರೊಬೆಷನರಿ ಎಸ್‌ಐ ಅಜೆಯ್ ಎಸ್ ಮೆನೋನ್, ಎಎಸ್‌ಐ ಅತುಲ್ ರಾಂ, ರಾಜೇಶ್, ಮಹಿಳಾ ಪೊಲೀಸ್ ಸಿಬ್ಬಂದಿ ದರ್ಶನ, ಡ್ಯಾನ್‌ಸಾಫ್ ತಂಡದ ಸದಸ್ಯರುಗ ಳಾದ ಪ್ರಜೀಶ್, ಹರಿಪ್ರಸಾದ್ ಮತ್ತು ಚಾಲಕ ಪ್ರಶೋಬ್ ಎಂಬಿವರನ್ನೊ ಳಗೊಂಡ ಪೊಲೀಸರ ತಂಡ ಈ ಕಾರ್ಯಾಚರಣೆ ನಡೆಸಿದೆ. ಬಂಧಿತ ನನ್ನು ನಂತರ ನ್ಯಾಯಾಲಯದ ನಿರ್ದೇಶ ಪ್ರಕಾರ ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ.

You cannot copy contents of this page