ಮನೆ ಅಂಗಳದಲ್ಲಿ ಆಟವಾಡುತ್ತಿದ್ದ ಮಗುವನ್ನು ಕಚ್ಚಿಕೊಂಡು ಹೋದ ಬೀದಿನಾಯಿಗಳ ಗುಂಪು

ಕಾಸರಗೋಡು: ಮನೆ ಅಂಗಳ ದಲ್ಲಿ ಆಟವಾಡುತ್ತಿದ್ದ ಒಂದೂವರೆ ವರ್ಷದ ಮಗುವನ್ನು ಬೀದಿ ನಾಯಿ ಗಳ ಗುಂಪು ಕಚ್ಚಿ ಎಳೆದುಕೊಂಡು ಹೋದ ಘಟನೆ ಪಡನ್ನ ಬಳಿ ನಡೆದಿದೆ.

ಪಡನ್ನ ವಡಕ್ಕೇಪುರತ್ತ್ ಮಣ್ಣಾತಿಗೆ ಸಮೀಪದ ಫಾಬಿನಾ-ಸುಲೈಮಾನ್ ದಂಪತಿ ಪುತ್ರ ಬಷೀರ್ (೧.೫ವರ್ಷ) ನಿನ್ನೆ ಸಂಜೆ ಮನೆ ಅಂಗಳದಲ್ಲಿ ಆಟವಾಡುತ್ತಿದ್ದ ವೇಳೆ ಅಲ್ಲಿಗೆ ನುಗ್ಗಿ ಬಂದ ಬೀದಿನಾಯಿಗಳ ಗುಂಪೊಂದು ಆ ಮಗುವನ್ನು ಕಚ್ಚಿಕೊಂಡೊಯ್ದಿದೆ. ಆಗ ಮಗು ಜೋರಾಗಿ ಅಳತೊಡಗಿದ ಸದ್ದು ಕೇಳಿ ಮನೆ ಯವರು ಓಡಿ ಬಂದಾಗ ನಾಯಿಗಳು ಮಗುವನ್ನು ಅಲ್ಲೇ ಉಪೇಕ್ಷಿಸಿ ಓಡಿ ಹೋಗಿವೆ. ತಲೆ ಮತ್ತು ದೆಹದ ಇತರ ಭಾಗಗಳಿಗೆ ಗಂಭೀರಗಾಯ ಗೊಂಡ ಮಗುವನ್ನು ಬಳಿಕ ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸಾಗಿಸಿ ಅಲ್ಲಿ ದಾಖಲಿಸಲಾಗಿದೆ.

ಇದೇ ರೀತಿ ಇದೇ ಪ್ರದೇಶದಲ್ಲಿ ಬೀದಿ ನಾಯಿಗಳು ಆಕ್ರಮಿಸಿ ಇತರ ೩ ಮಂದಿ ಗಾಯಗೊಂಡಿದ್ದಾರೆ. ಮಿಸರಿಯಾ (೫೦), ಗಂಧರ್ವ್ (೯), ನಿಹಾನ್ (೬) ಎಂಬಿವರು  ಬೀದಿನಾಯಿ ಕಡಿತಕ್ಕೊಳ ಗಾಗಿದ್ದು ಅವರನ್ನು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

You cannot copy contents of this page