ಮನೆ ಅಂಗಳದಲ್ಲಿ ಬಿದ್ದು ಗಾಯಗೊಂಡಿದ್ದ ಕೃಷಿಕ ನಿಧನ

ಉಪ್ಪಳ: ಮನೆ ಅಂಗಳ ಬಳಿಯಲ್ಲಿ ಬಿದ್ದು ತಲೆಗೆ ಏಟು ತಗಲಿ ಗಂಭೀರ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕೃಷಿಕ ನಿಧನರಾದರು. ಮುಳಿಂಜ ಕುಂಟುಪುಣಿ ನಿವಾಸಿ ಕೃಷಿಕ ಕೊರಗಪ್ಪ ಶೆಟ್ಟಿ (69) ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಸೋಮವಾರ ಸಂಜೆ ಮನೆ ಅಂಗಳ ಬಳಿಯಿರುವ ಹಟ್ಟಿಗೆ ತೆರಳುತ್ತಿದ್ದ ವೇಳೆ ಜಾರಿ ಬಿದ್ದು ತಲೆಗೆ ಗಂಭೀರ ಏಟು ತಗಲಿದ ಅವರನ್ನು ಉಪ್ಪಳದ ಆಸ್ಪತ್ರೆಗೆ ಸಾಗಿಸಿ ಬಳಿಕ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಆದರೆ ನಿನ್ನೆ ಬೆಳಿಗ್ಗೆ ನಿಧನ ಹೊಂದಿದ್ದಾರೆ. ಇವರು ಈ ಹಿಂದೆ ಹಲವು ವರ್ಷಗಳ ಕಾಲ ವಿದೇಶದಲ್ಲಿ ಉದ್ಯೋಗಿಯಾಗಿದ್ದರು.
ಮುಳಿಂಜ ಶ್ರೀ ಮಹಾಲಿಂಗೇಶ್ವರ ಸೇವಾ ಸಮಿತಿ ಮತ್ತು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯಲ್ಲಿ ಸಕ್ರಿಯರಾಗಿದ್ದರು. ಮೃತರು ಪತ್ನಿ ಜಾನಕಿ ಶೆಟ್ಟಿ, ಮಕ್ಕಳಾದ ಶಾಂಭವಿ ಶೆಟ್ಟಿ, ರಿಶಿತ್ ಶೆಟ್ಟಿ, ಅಳಿಯ ಪ್ರವೀಣ್ ಶೆಟ್ಟಿ, ಸೊಸೆ ಮೋನಿಶ ಶೆಟ್ಟಿ, ಸಹೋದರ ವಿಶ್ವನಾಥ ಶೆಟ್ಟಿ, ಸಹೋದರಿಯರಾದ ಲಕ್ಷಿ÷್ಮÃ ಶೆಟ್ಟಿ, ಚಂದ್ರಾವತಿ ಶೆಟ್ಟಿ, ಸಾವಿತ್ರಿ ಶೆಟ್ಟಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿ ದ್ದಾರೆ. ಓರ್ವ ಸಹೋದರಿ ಕುಸುಮ ಶೆಟ್ಟಿ ಮೂರು ತಿಂಗಳ ಹಿಂದೆ ನಿಧನರಾಗಿದ್ದಾರೆ. ನಿನ್ನೆ ಸಂಜೆ ಮನೆ ಹಿತ್ತಿಲಿನಲ್ಲಿ ಅಂತ್ಯಸAಸ್ಕಾರ ನಡೆಯಿತು. ನಿಧನಕ್ಕೆ ಮುಳಿಂಜ ಶ್ರೀ ಮಹಾಲಿಂಗೇಶ್ವರ ಸೇವಾ ಸಮಿತಿ, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಮುಳಿಂಜ ಶಿವತೀರ್ಥಪದವು, ಯುವಕೇಸರಿ ಪ್ರೆಂಡ್ಸ್ ಮುಳಿಂಜ ಶಿವತೀರ್ಥಪದವು ಸಂತಾಪ ಸೂಚಿಸಿದೆ.

RELATED NEWS

You cannot copy contents of this page