ಮನೆ ಅಂಗಳದಲ್ಲಿ ಮಗುವಿಗೆ ಊಟ ನೀಡುತ್ತಿದ್ದಾಗ ತೆಂಗಿನ ಮರಬಿದ್ದು ಯುವತಿ ಮೃತ್ಯು
ಕಲ್ಲಿಕೋಟೆ: ಮನೆ ಅಂಗಳದಲ್ಲಿ ನಿಂತುಕೊಂಡು ಮಗುವಿಗೆ ಊಟ ನೀಡುತ್ತಿದ್ದ ವೇಳೆ ತೆಂಗಿನ ಮರ ಮಗುಚಿಬಿದ್ದು ಯುವತಿ ಮೃತಪಟ್ಟ ದಾರುಣ ಘಟನೆ ಸಂಭವಿಸಿದೆ. ಕುನಿಯಿಲ್ ಪೀಡಿಗ ಎಂಬಲ್ಲಿಗೆ ಸಮೀಪದ ಪರಂಬತ್ತ್ ಜಂಶೀದ್ ಎಂಬವರ ಪತ್ನಿ ಫಹೀಮ (30) ಮೃತಪಟ್ಟ ದುರ್ದೈವಿ. ನಿನ್ನೆ ಸಂಜೆ ಮನೆ ಹಿತ್ತಿಲಲ್ಲಿರುವ ತೆಂಗಿನ ಮರ ಬುಡ ಸಹಿತ ಮಗುಚಿ ಅಂಗಳಕ್ಕೆ ಬಿದ್ದಿದೆ. ಘಟನೆ ವೇಳೆ ಅಂಗಳದಲ್ಲಿ ಫಹೀಮ ಮಗುವಿಗೆ ಊಟ ನೀಡುತ್ತಿದ್ದರು. ಈ ವೇಳೆ ಮಗುಚಿದ ತೆಂಗಿನ ಮರ ಇವರ ಮೇಲೆ ಬಿದ್ದಿದೆ. ಈ ಸಂದರ್ಭದಲ್ಲಿ ಸಮೀಪದ ರಸ್ತೆಯಲ್ಲಿ ಪಟ್ರೋಲಿಂಗ್ ನಡೆಸುತ್ತಿದ್ದ ಪೊಲೀಸರು ತಮ್ಮ ವಾಹನದಲ್ಲಿ ಫಹೀಮರನ್ನು ಆಸ್ಪತ್ರೆಗೆ ತಲುಪಿಸಿದ್ದು, ಆದರೂ ಜೀವ ರಕ್ಷಿಸಲಾಗಲಿಲ್ಲ. ವಿದೇಶದಲ್ಲಿ ಉದ್ಯೋ ಗದಲ್ಲಿರುವ ಪತಿ ಜಂಶೀದ್ ವಿಷಯ ತಿಳಿದು ಊರಿಗೆ ಆಗಮಿಸಿದ್ದಾರೆ.